• first
    second
    third
    Slide
    previous arrow
    next arrow
  • ದೊಡ್ಡಬೈಲ್ ನಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ

    300x250 AD

    ಶಿರಸಿ; ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಇವರ ಕೃಪಾಶೀರ್ವಾದಗಳೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 10ನೇ ವರ್ಷದ “ದಶಮಾನೋತ್ಸವ” ಭಜನಾ ಕಾರ್ಯಕ್ರಮ ದಿನಾಂಕ ಮೇ 7 ಶನಿವಾರ ದೊಡ್ಡಬೈಲನಲ್ಲಿ ನಡೆಯಲಿದೆ.


    ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ದೊಡ್ಡಬೈಲ್ ಮರಾಠಿ ಮತ ಬಾಂಧವರಿಂದ ನಡೆಯುವ ಸತ್ಯನಾರಾಯಣ ಪೂಜೆಯನ್ನು ವೇ||ಮೂ|| ವಿನಯ್ ಭಟ್ಟ ದೇವರಕೇರಿ ನಡೆಸಿಕೊಡಲಿದ್ದು ಬೆಳಿಗ್ಗೆ 8 ಘಂಟೆಯಿಂದ ಪ್ರಾರಂಭಿಸಲಿದ್ದಾರೆ. ಬೆಳಿಗ್ಗೆ 11 ಘಂಟೆಗೆ ಮಹಾಪೂಜೆ ನಡೆಯಲಿದ್ದು ನಂತರ ಪ್ರಸಾದ ವಿತರಣೆ ವೈದಿಕರಿಂದ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ 1 ಘಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವಿರುತ್ತದೆ.

    ಮಧ್ಯಾಹ್ನ 3 ಘಂಟೆಯಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದ್ದು ಸಂಜೆ 5 ಘಂಟೆಯಿಂದ ಭಜನಾ ಕಾರ್ಯಕ್ರಮವನ್ನು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ದೊಡ್ಡಬೈಲ್, ಶ್ರೀ ಹುಲಿಯಪ್ಪ ಭಜನಾ ಮಂಡಳಿ, ಮಲೇನಳ್ಳಿ, ಶ್ರೀ ಸೋಮೇಶ್ವರ ಭಜನಾ ಮಂಡಳಿ, ಮೊಗದ್ದೆ, ಮಾಸ್ತೇಶ್ವರಿ ಭಜನಾ ಮಂಡಳಿ ಬಿಲ್ಲುಗದ್ದೆ ಇವರು ನಡೆಸಿಕೊಡಲಿದ್ದಾರೆ.

    300x250 AD


    ನಂತರ ಸಂಜೆ 6 ಘಂಟೆಗೆ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಪಾದುಕಾ ಪೂಜೆ ಹಾಗೂ ಆಶೀರ್ವಚನ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ರಾತ್ರಿ 8 ರಿಂದ ಸವಾಲ್ ಕಾರ್ಯಕ್ರಮವಿದ್ದು ರಾತ್ರಿ 9.30 ರಿಂದ ಶ್ರೀ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಎಂಬ ಯಕ್ಷಗಾನ (ಬಯಲಾಟ) ಕಾರ್ಯಕ್ರಮವಿರುತ್ತದೆ.


    ಪೂಜಾವೃತಧಾರಿಗಳು ರೂ 251/- ಪೂಜಾ ಸಮಿತಿ ಪದಾಧಿಕಾರಿಗಳಿಗೆ ನೀಡಿ ರಶೀದಿ ಪಡೆದುಕೊಳ್ಳುವುದು ಮತ್ತು ಪೂಜೆಗೆ ಕುಳಿತುಕೊಳ್ಳುವವರು 2 ಕುಡಿಬಾಳೆ, ಎಲೆ, ಲೋಟ, ತಂಬಿಗೆ, ಅಕ್ಕಿ, ಕಾಯಿ ಬಾಳೇಹಣ್ಣು ಚಮಚ, ಹೂವು ವಸ್ತ್ರಗಳನ್ನು ತರಲು ವಿನಂತಿಸಿದೆ.
    ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರು / ಪದಾಧಿಕಾರಿಗಳು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ದೊಡ್ಡಬೈಲ ಹಾಗೂ ಮೇಲ್ವಿಚಾರಕರು /ತಿ ಸೇವಾ ಪ್ರನಿಧಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಶಿರಸಿ ಭೈರುಂಭೆ ಕಾರ್ಯಕ್ಷೇತ್ರ ಇವರು ಪ್ರಕಟಣೆಯಲ್ಲಿ ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Back to top