ಶಿರಸಿ: ಭಾಷೆ ಮನುಷ್ಯನ ಬಹುಮುಖ್ಯ ಅಂಗ. ಮನುಷ್ಯನ ದರ್ಪಣವನ್ನು ಪ್ರತಿಬಿಂಬಿಸುವುದೇ ಭಾಷೆ. ಭಾಷೆ ಸಂಸ್ಕೃತಿ ಯನ್ನು ಬೆಳೆಸಿದಂತೆ ದೇಶ ರಾಷ್ಟ್ರ ಬೆಳೆಯುತ್ತದೆ ಎಂದು ಪ್ರೋ.ಕೆ ಎನ್ ಹೊಸ್ಮನಿ ಹೇಳಿದರು.
ಅವರು ನಗರದ ಜಿಲ್ಲಾ ಪತ್ರೀಕಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಯ ಪ್ರಯುಕ್ತ ಉಪನ್ಯಾಸ ನೀಡಿ ಮಾತನಾಡಿ ಕನ್ನಡ ಭಾಷೆಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ನೂರಾಎಂಟು ವರ್ಷಗಳ ಇತಿಹಾಸ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಎಚ್ ವಿ ನಂಜುಂಡಯ್ಯನವರ ಕಾಲದಲ್ಲಿ ಸಾಹಿತ್ಯ ಪರಿಷತ್ ರಚನೆಯಾಗುತ್ತದೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರೋತ್ಸಾಹ ಸಹ ಕನ್ನಡ ಸಾಹಿತ್ಯ ಪರಿಷತ್ ಗೆ ಸಿಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಮೊದಲ ಸಮ್ಮೇಳನದ ಅಧ್ಯಕ್ಷರಾಗಿ ನಂಜುಂಡಯ್ಯ ನವರು ಆಯ್ಕೆಯಾಗಿದ್ದರು. 1939ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಕಟ್ಟಡ ಸಹ ನಿರ್ಮಾಣವಾಗುತ್ತದೆ. ಇಂತಹ ದಿಗ್ಗಜರು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದವರು. ಸಾಕಷ್ಟು ಮೌಲಿಕ ಕೃತಿಗಳನ್ನು ಕಸಾಪ ಪ್ರಕಟಿಸಿದೆ. ರಾಮಕೃಷ್ಣ ಹೆಗಡೆ ಯವರು ಮುಖ್ಯಮಂತ್ರಿ ಯಾದ ಸಮಯದಲ್ಲಿ ಕನ್ನಡ ಸಾಹಿತ್ಯ ಕ್ಕೆ ಸಾಕಷ್ಟು ಕೊಡುಗೆಗಳು ಸಿಕ್ಕಿದೆ. ಕನ್ನಡ ಭಾಷೆಯ ಕೀರ್ತಿ ವಿಶ್ವವ್ಯಾಪಿ ಪಸರಿಸುವಂತಾಗಬೇಕು.
ಕನ್ನಡ ಸಾಹಿತ್ಯ ಪರಿಷತ್ ನ ಅತ್ಯುನ್ನತ ಪ್ರಶಸ್ತಿ “ನೃಪತುಂಗ” ಪ್ರಶಸ್ತಿ ಯಾಗಿದೆ.ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.
ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಮಾತನಾಡಿ ನಮ್ಮ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಏಳಿಗೆಗಾಗಿ ಶ್ರಮಿಸುತ್ತೇವೆ.ಸಾಹಿತ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಇದೇ ನಮ್ಮ ಉದ್ದೇಶ ವಾಗಿದೆ.ಶಿರಸಿ ತಾಲೂಕಿನ ಬರಹಗಾರರ ಹಾಗೂ ಪ್ರಶಸ್ತಿ ಪಡೆದವರ ಪರಿಚಯವನ್ನು ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆಗಳನ್ನು ನಡೆಸುತ್ತಿದ್ದೇವೆ ಎಂದರು.
ಜಿ ಐ ಹೆಗಡೆ ಸೋಂದಾ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ಪ್ರಾರಂಭದಿಂದಲೂ ಕನ್ನಡ ಭಾಷೆ ಸಂಸ್ಕೃತಿ ಗಾಗಿ ಶ್ರಮಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಗೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಾಕಷ್ಟು ಜನರು ಶ್ರಮಿಸುತ್ತಿದ್ದಾರೆ.
ಯಕ್ಷಗಾನದಲ್ಲಿ ನಮ್ಮ ಕನ್ನಡ ಭಾಷೆಯನ್ನೇ ಬಳಸುತ್ತಾರೆ.ಬೇರೆ ಯಾವ ಭಾಷೆಯಲ್ಲೂ ಯಕ್ಷಗಾನ ವಿಲ್ಲ.ಇದು ಯಕ್ಷ ಕ್ಷೇತ್ರ ಕನ್ನಡ ಭಾಷೆಗೆ ನೀಡಿದ ಅತ್ಯದ್ಭುತ ಕೊಡುಗೆಯಾಗಿದೆ ಎಂದರು.
ಹಿರಿಯ ಕವಯತ್ರಿ ಭಾಗೀರಥಿ ಹೆಗಡೆ ಮಾತನಾಡಿ ಕನ್ನಡ ಭಾಷೆಗೆ ಕವಿಗಳ ಕೊಡುಗೆ ಅಪಾರ ವಾಗಿದೆ.ಕನ್ನಡ ಭಾಷೆ ಸಂಸ್ಕೃತಿ ಯನ್ನು ಬೆಳೆಸಿ ಉಳಿಸುವಲ್ಲಿ ಕೃತಿಕಾರರು ಬಹುಮುಖ್ಯ ಪಾತ್ರ ವನ್ನು ವಹಿಸಿದ್ದಾರೆ. ಅನುಭವಗಳನ್ನು ಅನುಭಾವವನ್ನಾಗಿ ಬರೆಯುವುದೇ ಸಾಹಿತ್ಯ ಎಂದರು.
ನಂತರ ಕವಿಮನಸ್ಸುಗಳಿಂದ ಕವಿಗೊಷ್ಠಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ಹೆಗಡೆ ಸೇರಿ ಹಲವರು ಉಪಸ್ಥಿತರಿದ್ದರು.