• Slide
  Slide
  Slide
  previous arrow
  next arrow
 • ಯಶಸ್ವಿಯಾದ ಲಯನ್ಸ್ ಜೋನ್ ಸೋಶಿಯಲ್ ಕಾರ್ಯಕ್ರಮ

  300x250 AD

  ಹೊನ್ನಾವರ: ನಾವು ಮನುಷ್ಯ ಜನ್ಮಕ್ಕೆ ಬಂದಾಗ ಅನೇಕ ಋಣಗಳನ್ನು ತೀರಿಸಬೇಕಾಗುತ್ತದೆ. ಸೇವೆಯನ್ನು ನಾವು ಎಂದಿಗೂ ಅಹಂಕಾರದಿಂದ ಮಾಡಬಾರದು. ಅದನ್ನು ನಾವು ಋಣ ತೀರಿಸಬೇಕಾದ ಕರ್ತವ್ಯವೆಂದು ಭಾವಿಸಬೇಕು ಎಂದು ಲಯನ್ಸ್ ಕ್ಲಬ್‍ನ ಮಾಜಿ ಜಿಲ್ಲಾ ಖಜಾಂಚಿ ಎಚ್.ಎನ್.ನಾಯ್ಕ ಹೇಳಿದರು. ಪಟ್ಟಣದ ಲಯನ್ಸ್ ಭವನದಲ್ಲಿ ಏರ್ಪಡಿಸಿದ್ದ ಜೋನ್ ʼಎʼ ಜೋನ್ ಸೋಶಿಯಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಹೊನ್ನಾವರ ಆಶ್ರಯದಲ್ಲಿ ಜೋನ್ ಚೇರ್ ಪರ್ಸನ್ ರಾಜೇಶ ಸಾಲೇಹಿತ್ತಲ್ ನೇತ್ರತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧಡೆಯ ಲಯನ್ಸ್ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ಸಿಗೆ ಕಾರಣರಾದರು.

  ಲಯನ್ ಜೋನ್ ಚೇರ್ ಪರ್ಸನ್ ರಾಜೇಶ ಸಾಲೆಹಿತ್ತಲ್, ಜಿಲ್ಲೆಯ ಎಲ್ಲಾ ಹಿರಿಯ ಲಯನ್ಸ್ ಸದಸ್ಯರ ಸಹಕಾರದಿಂದ ನಾನು ಇಂತಹ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿ, ತಮಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು.

  ಕರ್ನಲ್ ಪಿ.ಎಮ್.ನಾಯ್ಕ, ಕಾರವಾರ, ಸಿದ್ದಾಪುರ, ಅಂಕೋಲಾ, ಮುರ್ಡೇಶ್ವರ ಹಾಗೂ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಲಯನ್ಸ್ ಕ್ಲಬ್ ಪಧಾಧಿಕಾರಿಗಳು ರಾಜೇಶ ಸಾಲೇಹಿತ್ತಲ್‍ರವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಚೇರ್ ಪರ್ಸನ್ ಎಂದು ಪ್ರಶಸ್ತಿ ಪಡೆದ ರಾಜೇಶ ಸಾಲೇಹಿತ್ತಲ್‍ರವರನ್ನು ಹಾಗೂ ಎಚ್.ಎನ್.ನಾಯ್ಕರವರನ್ನು ಹೊನ್ನಾವರ ಲಯನ್ಸ್ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.

  300x250 AD

  ವೇದಿಕೆಯಲ್ಲಿ ವೈಶಾಲಿ ಸಾಲೇಹಿತ್ತಲ್, ಲಯನ್ಸ್ ಅಧ್ಯಕ್ಷ ವಿನೋದ ನಾಯ್ಕ, ಕಾರ್ಯದರ್ಶಿ ಉದಯ್ ಎಚ್.ನಾಯ್ಕ, ಲಯನ್ಸ್ ಕ್ಲಬ್‍ನ ಜಿಲ್ಲಾ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಸುರೇಶ ನಾಯ್ಕ, ಎಂ.ಜಿ.ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ವಿನೋದ ನಾಯ್ಕ ಸ್ವಾಗತಿಸಿದರು.

  ಡಾ.ಪ್ರಮೋದ ಫಾಯ್ದೆ ರಾಜೇಶ ಸಾಲೇಹಿತ್ತಲ್‍ರವರ ಸಮಾಜಸೇವೆಯನ್ನು ಅಭಿನಂಸಿದ ಸ್ವರಚಿತ ಕವನ ವಾಚಿಸಿದರು. ಶಾಂತರಾಮ ನಾಯ್ಕ, ಎಂ.ಜಿ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಉದಯ ನಾಯ್ಕ ವಂದಿಸಿದರು. ಶಿಕ್ಷಕಿ ಲಕ್ಷ್ಮಿ ಹೆಗಡೆ ಪ್ರಾರ್ಥಿಸಿದರು. ಶ್ರೀನಿಧಿ ಹಾಗೂ ಅನ್ವಿತಾ ಪ್ರಾರ್ಥನಾ ನೃತ್ಯ ಮಾಡಿದರು. ಆಗಮಿಸಿದ ಎಲ್ಲರಿಗೂ ವಿವಿಧ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top