ಮುಂಡಗೋಡ: ಪಟ್ಟಣದ ಬಸ್ ಡಿಪೋಗೆ ಹಂತ ಹಂತವಾಗಿ 50 ಹೊಸ ಬಸ್‍ಗಳನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮಲು ಘೋಷಿಸಿದರು.
ಅವರು ಬುಧವಾರ ಪಟ್ಟಣದಲ್ಲಿ ಬಸ್ ಡಿಪೋಗೆ ಶಂಕು ಸ್ಥಾಪನೆ ಹಾಗೂ ಹೊಸ ಬಸ್‍ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಸರಕಾರ ರಾಜ್ಯಾದ್ಯಂತ ಹಳೆ ಬಸ್‍ಗಳನ್ನು ಹಿಂದಕ್ಕೆ ಪಡೆದು ಹೊಸ ಬಸ್‍ಗಳನ್ನು ನೀಡಿ ಸಣ್ಣ ಕುಗ್ರಾಮಗಳಿಂದ ಪಟ್ಟಣಕ್ಕೆ ಬರುವಂತ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಯಾವ ಪ್ರದೇಶ ಜನರೂ ಸಾರಿಗೆ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಗ್ರಾಮಾಂತರ ಪ್ರದೇಶ ಜನರಿಗೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ವಿದ್ಯಾರ್ಥಿಗಳು ಶಾಲಾ- ಕಾಲೇಜಗೆ ಬಂದು ಹೋಗಲು ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಬೊಮ್ಮಾಯಿವರು ಕಿತ್ತೂರ ಕರ್ನಾಟಕ ಘೋಷಣೆ ಮಾಡಿದರು. ಬೊಮ್ಮಾಯಿವರು ಕಿತ್ತೂರ ಕರ್ನಾಟಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಸಾರಿಗೆ ಇಲಾಖೆಯಿಂದ ಕಿತ್ತೂರ ಕರ್ನಾಟಕ ಭಾಗದಲ್ಲಿ ಹೊಸ ಬಸ್ ನಿಲ್ದಾಣಗಳು, ಘಟಕಗಳು ನಿರ್ಮಾಣವಾಗುತ್ತಿವೆ ಸಾರಿಗೆ ಇಲಾಖೆಯನ್ನು ನಷ್ಟ ದಿಂದ ಲಾಭದಾಯಕ ಇಲಾಖೆಯನ್ನಾಗಿ ಮಾರ್ಪಾಡುವ ಮಾಡುವಂತ ಕೆಲಸ ಮಾಡಲಾಗುವುದು ಎಂದರು.
ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಹೊಸ ಬಸ್ ಡಿಪೋ ಪೂರ್ಣಗೊಂಡ ಮೇಲೆ ಉದ್ಘಾಟನೆಗೆ ಸಾರಿಗೆ ಸಚಿವ ಶ್ರೀರಾಮಲು ಅವರನ್ನು ಕರೆ ತರಲಾಗುವುದು ಎಂದರು. ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಎಲ್ಲರೂ ಸರಕಾರಿ ಸಾರಿಗೆ ಬಸ್‍ಗಳನ್ನು ಅವಲಂಬಿಸಿದರೆ ಸಾರಿಗೆ ಸಂಸ್ಥೆಗೆ ಲಾಭವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಾಕರಸಾ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ, ಕೆಎಸ್‍ಆರ್‍ಟಿಸಿ ನಿರ್ದೇಶಕ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಸೇರಿದಂತೆ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರು ಮುಂತಾದವರು ಇದ್ದರು.