ಯಲ್ಲಾಪುರ: ತಾಲೂಕಿನ ಬಾರೆಯಲ್ಲಿ ದಿ.ಸುಬ್ಬಯ್ಯ ಭಟ್ಟ ಗೋಪನಪಾಲ ಅವರ ಸ್ಮರಣಾರ್ಥ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಗೋಪಾಲ ಆಚಾರಿ ತೀರ್ಥಹಳ್ಳಿ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಗೋಪಾಲ ಆಚಾರಿ, ಸುದೀರ್ಘ ಕಲಾ ಜೀವನದಲ್ಲಿ ಕಲಾಭಿಮಾನಿಗಳು, ಸಂಘಟಕರು ಹಾಗೂ ಕಲಾವಿದರು ನೀಡಿದ ಸಹಕಾರ, ಪ್ರೋತ್ಸಾಹವನ್ನು ಸ್ಮರಿಸಿದರು. ಹಿರಿಯರಾದ ಗಜಾನನ ಗಾಂವ್ಕಾರ ಅಭಿನಂದನಾ ನುಡಿಗಳನ್ನಾಡಿದರು.
ಗೋಪಾಲ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ನಾರಾಯಣ ಭಟ್ಟ ಮಲವಳ್ಳಿ, ಸ್ಥಳೀಯ ಮುಖಂಡರಾದ ಸುಬ್ಬಯ್ಯ ಧೋಗಳೆ, ಗಣೇಶ ಹೆಬ್ಬಾರ್, ಸಂಘಟಕರಾದ ಪುಟ್ಟಯ್ಯ ಭಟ್ಟ, ರಾಘವೇಂದ್ರ ಭಟ್ಟ ಬೆಳ್ಸೂರು ಇತರರಿದ್ದರು. ಮಹಾಬಲೇಶ್ವರ ಭಟ್ಟ ಬಾರೆಮಠ ನಿರ್ವಹಿಸಿದರು. ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಪಾಂಚಜನ್ಯ ಹಾಗೂ ಕಂಸ ದಿಗ್ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.