• Slide
    Slide
    Slide
    previous arrow
    next arrow
  • ವೇತನ ಪರಿಷ್ಕರಣೆ ಮೂಲಕ ಸಂಬಳ ಹೆಚ್ಚಳಕ್ಕೆ ಶೀಘ್ರವೇ ಕ್ರಮ; ಸಚಿವ ರಾಮುಲು

    300x250 AD

    ಶಿರಸಿ; ತಾಲೂಕಿನ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ನೂತನ ಬಸ್ ಘಟಕದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಾರಿಗೆ ಸಚಿವ ಶ್ರೀರಾಮಲು ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು.

    ಚಾಲಕ, ನಿರ್ವಾಹಕರಿಗೆ ಸಂಬಳ ಸಾಲುತ್ತಿಲ್ಲ ಎಂಬುದು ನಿಜ. ಈ ಕಾರಣಕ್ಕೆ ವೇತನ ಪರಿಷ್ಕರಣೆ ಮಾಡುವ ಮೂಲಕ ಹೆಚ್ಚಿನ ಸಂಬಳ ನೀಡಲು ಕ್ರಮವಹಿಸಲಾಗುವುದು. ಸಂಬಳ ಹೆಚ್ಚಿಸಲು ವೇತನ ಪರಿಷ್ಕರಣೆ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಳಿ ಚರ್ಚಿಸಿ ಪರಿಷ್ಕರಣೆ ಮಾರ್ಗಸೂಚಿ ಹೊರಡಿಸಿ,ಆರ್ಥಿಕ ಇಲಾಖೆ ಅನುಮತಿ ಪಡೆದು ಸಂಬಳ ಹೆಚ್ಚಿಸಲು ಕ್ರಮವಹಿಸಲಾಗುವುದು ಎಂದು ಸಚಿವ ಶ್ರೀರಾಮುಲು ಹೇಳಿದರು.

    ಒತ್ತಡಗಳ ನಡುವೆ ಅಪಘಾತ ರಹಿತ ಚಾಲನೆ ಮಾಡುವುದು ಕಷ್ಟಸಾಧ್ಯ. ಆದರೆ ಹಲವಾರು ಚಾಲಕರು ಈ ಸಾಧನೆ ಮಾಡಿದ್ದಾರೆ, ಅಗತ್ಯ ಇರುವ ಚಾಲಕ, ನಿರ್ವಾಹಕರನ್ನು ಒದಗಿಸುವ ಕಾರ್ಯ ಮಾಡಲಾಗುವುದು. ಸಾವಿರಾರು ಬಸ್ ಗುಜರಿಗೆ ಹಾಕುವ ಸ್ಥಿತಿಯಿದೆ. ಈ ಕಾರಣ 4 ಸಾವಿರ ಬಸ್ ಖರೀದಿಸಲಿದ್ದು, ನಿಗಮದ ವ್ಯಾಪ್ತಿಗೆ 100 ಬಸ್ ನೀಡಲಾಗುವುದು. ಮುಷ್ಕರ ಸಂದರ್ಭದಲ್ಲಿ ಬೇರೆಡೆ ವರ್ಗಾವಣೆಯಾದ ಸಿಬ್ಬಂದಿಯನ್ನು ಮಾತೃಸಂಸ್ಥೆಗೆ ಕಳುಹಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

    ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಾಕಷ್ಟು ವೇಗ ನೀಡಲಾಗಿದೆ. ಅನಗತ್ಯವಾಗಿ ಅಭಿವೃದ್ಧಿ ಆಗಿಲ್ಲ ಎನ್ನುವವರು ತಮ್ಮ ಮನಸ್ಥಿತಿ ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದರು.

    300x250 AD

    ಈ ವೇಳೆ ಅಪಘಾತ ರಹಿತ ಚಾಲಕರಾದ ಆರ್.ಕೆ.ದೇವಾಡಿಗ, ಆರ್.ರಂಗಸ್ವಾಮಿ, ಐ.ಎಂ.ನಾಯ್ಕ, ವಿ.ಎಂ.ನಾಯ್ಕ, ಎಸ್.ಐ.ನಾಯ್ಕ,
    ಪಿ.ಬಿ.ಕಡವಾಡ, ಬಿ.ಎ.ಉಪ್ಪಿನ್, ಮಿನಿನ್ ರೊಡ್ರಿಗಿಸ್, ಶ್ರೀಧರ ಪಟಗಾರ, ಮಹೇಶ್ವರಪ್ಪ ಎ.ಕೆ, ಎಂ.ಎಸ್.ನಾಯ್ಕ,
    ಎಂ.ಡಿ.ನಾಯ್ಕ, ಶ್ರೀಧರ ಪಟಗಾರ, ಕೆ.ಒ.ಪ್ರಸನ್ನ, ಎಚ್.ಡಿ. ವಿಜಯಕುಮಾರ, ಡಿ.ಎಂ.ಪೆಂಡಾರಿ, ಪರಶುರಾಮ ಎಚ್. ಎನ್, ಎಂ.ಎ.ನದಾಪ್, ಎಸ್.ಎನ್.ನಾಯ್ಕ, ಎಂ.ವಿ.ಭಂಡಾರಿ, ಯು.ಎಸ್.ಗುನಗಾ, ಆರ್.ಆರ್.ನಾಯ್ಕ ಕುಮಟಾ, ಎಲ್.ಎನ್. ಹೊಸಕಟ್ಟಾ, ಮಹೇಶ ಬಸವರಾಜ, ಆರ್.ಆರ್. ನಾಯ್ಕ ಕಾರವಾರ, ಎ.ಬಿ.ಬೆನ್ನೂರ, ವಿ.ಎಸ್.ಕಲ್ಗುಟ್ಕರ್, ಯು.ಆರ್.ಚಳಗಿ, ಪವಾಡಪ್ಪ ಮಾದರ, ಎಸ್.ಕೊಠಾರಕರ, ಬಿ.ವಿ.ನಾಯಕ, ಮನೋಜ ಮಾಳ್ಸೇಕರ, ಶಿವಾನಂದ ರಕ್ಕಸಗಿ, ಎಸ್.ಎಚ್. ತಂಗಡಗಿ, ಮಹಾಬಲೇಶ್ವರ ನಾಯ್ಕ, ಮೋಹನ ನಾಯ್ಕ, ದ್ಯಾಮಗೊಂಡ ಕುಂಬಾರ, ವಿ.ಕೆ.ಗುನಗಾ, ಪಿ.ಪಿ.ಗೌಡ, ಎಸ್.ಎಸ್.ನಾಯ್ಕ, ಎಂ.ಐ.ಬಡಿಗೇರ, ಶಶಿಕಿರಣ ಸಿರ್ಸಿಕರ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

    ವೇದಿಕೆಯಲ್ಲಿ ಎನ್‌.ಡಬ್ಲ್ಯು.ಕೆ.ಆರ್.ಟಿ.ಸಿ. ಅಧ್ಯಕ್ಷ ವಿ.ಎಸ್.ಪಾಟೀಲ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಧಾರವಾಡದ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ವಿಭಾಗದ ಜಂಟಿ ಆಯುಕ್ತೆ ಎಂ.ಶೋಭಾ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top