ಶಿರಸಿ; ಯಕ್ಷ ಕಲಾಸಂಗಮ ಮಹಿಳಾ ಯಕ್ಷಗಾನ ಕೇಂದ್ರ ಹಾಗೂ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಿರಸಿಯ ಆದರ್ಶ ವನಿತಾ ಸಮಾಜದಲ್ಲಿ ಮೇ. 7 ಶನಿವಾರ 3:30 ರಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ. ಎಲ್. ಹೆಗಡೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಸೀತಾ ಕೂರ್ಸೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಮಂಡಳಿಯ ಮಾಜಿ ಸದಸ್ಯೆ ನಿವೃತ್ತ ಪ್ರೊಫೆಸರ್ ವಿಜಯನಳಿನಿ ರಮೇಶ್, ಸಾಹಿತಿ ಭಾಗೀರಥಿ ಹೆಗಡೆ,ನಯನ ಫೌಂಡೇಶನ್ ಮಾಧುರಿ ಶಿವರಾಂ, ಎಪಿಎಂಸಿ ಉಪಾಧ್ಯಕ್ಷೆ ಸವಿತಾ ಹೆಗಡೆ ಹಾಗೂ ಇತರರು ಭಾಗವಹಿಸಲಿದ್ದಾರೆ.
ಯಕ್ಷಕಲಾ ಸಂಗಮ ಅಧ್ಯಕ್ಷೆ ಹಾಗೂ ಶಿಕ್ಷಕಿ ಸುಮಾ ಹೆಗಡೆ ಗಡಿಗೆಹೊಳೆ ಗೌರವ ಉಪಸ್ಥಿತರಿದ್ದು, ಶಿಬಿರದ ಸಂಪನ್ಮೂಲ ವ್ಯಕ್ತಿ ಯಕ್ಷಗಾನ ಕಲಾವಿದ ನಿರಂಜನ ಜಾಗನಳ್ಳಿ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನವಿದ್ದು ‘ವೀರ ವೃಷಸೇನ’ ಎಂಬ ಮಕ್ಕಳ ಸಮಯಮಿತಿ ಯಕ್ಷಗಾನ ನಡೆಯಲಿದೆ. ನಂತರ ಮಂಜುನಾಥ ಭಾಗವತ ಹೊಸತೋಟ ಇವರ ರಚನೆಯಲ್ಲಿ ಮಹಿಳೆಯರಿಂದ ‘ವೀರವರ್ಮ ವಿಜಯ’ ಯಕ್ಷಗಾನ ಪ್ರದರ್ಶನವಿರುತ್ತದೆ.ಹಿಮ್ಮೇಳದಲ್ಲಿ ಗಜಾನನ ಭಟ್ ತುಳಗೇರಿ, ಮಂಜುನಾಥ್ ಕಂಚಿಮನೆ, ಚೆಂಡೆವಾದಕ ವಿಘ್ನೇಶ್ವರ ಕೆಸರಕೊಪ್ಪ ಇರಲಿದ್ದಾರೆ. ಭಾರತಿ ಹೆಗಡೆ ಹಾಗೂ ಹೇಮಲತಾ ಹೆಗಡೆ ಕಾರ್ಯಕ್ರಮ ನಿರೂಪಿಸಲಿದ್ದು, ಯಕ್ಷಕಲಾಸಂಗಮ ವೃಂದದವರಿಂದ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.