ಶಿರಸಿ:ತಾಲೂಕಿನ ಯಚಡಿ ಗ್ರಾಮದ ಬಬ್ಬೀಸರದಲ್ಲಿ ಶ್ರೀ ನಾಗ ಚೌಡೇಶ್ವರಿ ನಾಲ್ಕನೇ ವರ್ಧಂತಿ ಉತ್ಸವದ ಅಂಗವಾಗಿ ಮೇ 6 ಶುಕ್ರವಾರ ಸಾಯಂಕಾಲ 6 ಗಂಟೆಗೆ ಶಿರಸಿ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ನಡೆಯಲಿದೆ.
ಸ್ಥಳೀಯ ಕಲಾವಿದರನ್ನೊಳಗೊಂಡ ಈ ಯಕ್ಷಗಾನದ ವಿಶೇಷ ಆಕರ್ಷಣೆ ವಿನೂತನ ನರ್ತನದೊಂದಿಗೆ ಈಶ್ವರನ ಪಾತ್ರದಲ್ಲಿ ನಾಟ್ಯಾಚಾರ್ಯ ಶಂಕರ ಭಟ್ಟ ಹಾಗೂ ಪ್ರಪ್ರಥಮ ಬಾರಿಗೆ ಯುವ ಪ್ರತಿಭೆ ಕುಮಾರಿ ಭಾವನಾ ನಾಯ್ಕ ಇವಳು ಮೋಹಿನಿ ಪಾತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ.
ಹಿಮ್ಮೇಳ ದಲ್ಲಿ ಸರ್ವೇಶ್ವರ ಭಾಗ್ವತ್ ಮೂರೂರು, ಶಿವರಾಮ ಕೊಮಾರ ಯಲ್ಲಾಪುರ, ನಾರಾಯಣ ಕೋಮಾರ ಯಲ್ಲಾಪುರ, ಮುಮ್ಮೇಳದಲ್ಲಿ ರಘುಪತಿ ನಾಯ್ಕ ಹೆಗ್ಗರಣಿ, ಎಂ ಟಿ ಗೌಡ ಅರೆಹಳ್ಳ ಭರತ್ ನಾಯ್ಕ ಬಬ್ಬಿಸರ, ಸದಾನಂದ ಪಟಗಾರ ಕುಮಟಾ ಇರಲಿದ್ದಾರೆ.ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ವ್ಯವಸ್ಥಾಪಕ ರತ್ನಾಕರ ನಾಯ್ಕ ಬಬ್ಬೀಸರ ಮನವಿ ಮಾಡಿದ್ದಾರೆ.