ಶಿರಸಿ: ಯಡಳ್ಳಿಯ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿಯ ಶಾಲೆಯಲ್ಲಿ ಹೆಣ್ಣುಮಕ್ಕಳ ಶೌಚಾಲಯ ಅಭಿವೃದ್ಧಿಗೆ ಕ್ಯಾಂಪ್ಕೋ ನಿ„ಯಿಂದ 1,00,000 ರೂ. ಕೊಡುಗೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಶಾಲಾ ಸಮಿತಿಯ ಅಧ್ಯಕ್ಷ ಶ್ರೀಧರ ಹೆಗಡೆ ಮಶಿಗದ್ದೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಶಂಭುಲಿಂಗ ಹೆಗಡೆ ನಡಗೋಡು, ಎಂ.ವಿ. ಹೆಗಡೆ ಕಾನಗೋಡ, ದಯಾನಂದ ಭಟ್ ಕರಸುಳ್ಳಿ, ಗಣಪತಿ ಆರ್. ಹೆಗಡೆ ಬೆಳ್ಳಿಕೇರಿ, ಕ್ಯಾಂಪ್ಕೋ ಶಿರಸಿ ಪ್ರಾದೇಶಿಕ ವ್ಯವಸ್ಥಾಪಕ ಭರತ್ ಭಟ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.