• first
  second
  third
  Slide
  previous arrow
  next arrow
 • ಕಾರವಾರ – ಅಂಕೋಲಾದ ವಿವಿಧ ದೇವಾಲಯಗಳ ಅಭಿವೃದ್ಧಿಗೆ 2 ಕೋಟಿ ರೂ.

  300x250 AD

  ಕಾರವಾರ: ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಿದ್ದು, ದೇವಾಲಯ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿವೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

  ತಾಲ್ಲೂಕಿನ ಹಣಕೋಣಜೂಗ ದೇವತಿ ಮಾಯಿ ದೇವಸ್ಥಾನ ಅಭಿವೃದ್ಧಿಗೆ 15 ಲಕ್ಷ, ಅಸ್ನೋಟಿ ತುಳಸಿಕಟ್ಟೆ ಅಭಿವೃದ್ಧಿಗೆ 25 ಲಕ್ಷ, ನಗರಸಭೆ ವ್ಯಾಪ್ತಿಯ ಕೋಡಿಬಾಗ ಖಾಪ್ರಿ ದೇವಸ್ಥಾನಕ್ಕೆ 9 ಲಕ್ಷ, ದೇವಳಿವಾಡ ದುರ್ಗಾದೇವಿ ದೇವಸ್ಥಾನಕ್ಕೆ 9 ಲಕ್ಷ, ಸೋನಾರವಾಡ ಶಿವನಾಥ ವೆಂಕಟರಮಣ ದೇವಸ್ಥಾನಕ್ಕೆ 10 ಲಕ್ಷ, ಪೊಲೀಸ್ ಹೆಡ್ ಕ್ವಾರ್ಟಸ್ ಆಂಜನೇಯ ದೇವಸ್ಥಾನಕ್ಕೆ9 ಲಕ್ಷ, ಅಂಕೋಲಾ ತಾಲ್ಲೂಕಿನ ಶೆಟಗೇರಿ ಕೊಗ್ರೆ ಬೊಮ್ಮಯ್ಯ ದೇವಸ್ಥಾನಕ್ಕೆ 50 ಲಕ್ಷ, ವಾಸರಕುದ್ರಗಿ ಶಾಂತಿಕಾ ಪರಮೇಶ್ವರಿ ದೇವರ ಪರಿವಾರ ಕರಿಬೀರ ದೇವಸ್ಥಾನ ಅಭಿವೃದ್ಧಿಗೆ 8 ಲಕ್ಷ, ಬೆಲೇಕೇರಿ ಶಾಂತಿಕಾ ಪರಮೇಶ್ವರ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ, ಪುರಸಭೆ ವ್ಯಾಪ್ತಿಯ ಶಡಗೇರಿ ಕಾಳಮ್ಮ ದೇವಸ್ಥಾನಕ್ಕೆ 45 ಲಕ್ಷ ಹಾಗೂ ಶ್ರೀಕದಂಬೇಶ್ವರ ದೇವಸ್ಥಾನ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.

  ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ ಹೀಗೆ ನಿರ್ಮಾಣ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಇದರ ಜತೆ ಧಾರ್ಮಿಕ ತಾಣಗಳನ್ನು ಅಭಿವೃದ್ಧಿ ಪಡಿಸುವುದು ಸಹ ಮಹತ್ವದ ಯೋಜನೆ, ಯೋಚನೆಯಾಗಿತ್ತು. ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಕ್ಕೆ ಫಲ ದೊರಕಿದೆ. ವಿವಿಧ ದೇವಾಲಯಗಳ ಅಭಿವೃದ್ಧಿ ಕಾಮಗಾರಿಗಳು ಸದ್ಯದಲ್ಲಿಯೇ ಆರಂಭಗೊಳ್ಳಲಿವೆ ಎಂದು ಶಾಸಕಿ ತಿಳಿಸಿದ್ದಾರೆ.

  ಅನುದಾನವನ್ನು ಬಿಡುಗಡೆಗೊಳಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶಾಸಕಿ ರೂಪಾಲಿ ನಾಯ್ಕ ಹೃತ್ಪೂರ್ವಕ ಧನ್ಯವಾದವನ್ನು ಸಲ್ಲಿಸಿದ್ದಾರೆ.

  300x250 AD

  ಕೋಟ್–
  ಶೃದ್ಧೆ, ಭಕ್ತಿಯ ತಾಣವಾಗಿ ವಿವಿಧ ಸಮಾಜದ ಜನರು ಸಾಮೂಹಿಕವಾಗಿ ನಡೆದುಕೊಳ್ಳುವ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಸಿಗುವಂತೆ ಮಾಡುವುದು ನನ್ನ ಯೋಚನೆಯಾಗಿತ್ತು. ಆ ದಿಸೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಸರ್ಕಾರ ವಿವಿಧ ದೇವಾಲಯಗಳ ಅಭಿವೃದ್ಧಿಗೆ 2 ಕೋಟಿ ರೂ.ಗಳಷ್ಟು ನೆರವು ನೀಡಿದೆ. ಇದಕ್ಕಾಗಿ ಸಂಬಂಧಪಟ್ಟ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.– ರೂಪಾಲಿ ಎಸ್.ನಾಯ್ಕ, ಶಾಸಕಿ

  Share This
  300x250 AD
  300x250 AD
  300x250 AD
  Back to top