• Slide
    Slide
    Slide
    previous arrow
    next arrow
  • ನಿವೃತ್ತ ಶಿಕ್ಷಕ ಕಿರವತ್ತಿಯ ಜಾರ್ಜ್ ಫರ್ನಾಂಡಿಸ್ ನಿಧನ

    300x250 AD

    ಯಲ್ಲಾಪುರ: ಮೂಲತಃ ಕಿರವತ್ತಿ ನಿವಾಸಿಯಾಗಿದ್ದ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕ ಜಾರ್ಜ್ ಎಸ್.ಫರ್ನಾಂಡಿಸ್
    ಸೋಮವಾರ ಸಂಜೆ ಹಳಿಯಾಳದ ದುರ್ಗಾ ನಗರದ ಸಂತ ಲೂಕವಾಡದ ನಿವಾಸದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

    ಯಲ್ಲಾಪುರದ ಹೋಲಿ ರೋಸರಿ ಪ್ರೌಢಶಾಲೆ ಸೇರಿದಂತೆ ಅನೇಕ ಸೇವೆ ಸಲ್ಲಿಸಿದ್ದರು. ಅವರು ವಿವಿಧ ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೃಜನಾತ್ಮಕ ಕೌಶಲ್ಯಗಳಿಂದ ಭೋದನೆಗೆ ಚಿರಪರಿಚಿತರಾಗಿದ್ದರು. ಕಿರವತ್ತಿ ಸರ್ಕಾರಿ ಪ್ರೌಢ ಶಾಲರಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ, 2010ರಲ್ಲಿ ಯಡೋಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವಾ ನಿವೃತರಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರಿ ಹಾಗೂ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

    300x250 AD

    ಜಾರ್ಜ್ ಅತ್ಯುತ್ತಮ ನಳಪಾಕ ಪ್ರವೀಣರು ಹಾಗೂ ನೃತ್ಯ ಕಲಾವಿದರು ಆಗಿದ್ದರು, ವಿವಿಧ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡುವಲ್ಲಿ ಎತ್ತಿದ ಕೈ, ಕೆಲವು ದಿನಗಳಿಂದ ಹಳಿಯಾಳದಲ್ಲಿನ ತನ್ನ ಕಿರಿಯ ಸಹೋದರನೊಂದಿಗೆ ವಾಸವಾಗಿದ್ದರು. ಕಿರವತ್ತಿ ಚರ್ಚಿನ ಸದಸ್ಯರಾದ ಅಲೆಕ್ಸ್ ಸಿದ್ದಿ, ಆಶಿಸ್ ಡಯಾಸ್, ಮಿಂಗಲ್ ಡಯಾಸ್, ಮೊತೀಶ ಸಿದ್ದಿ, ಮ್ಯಾಕ್ಸಿ ಫನಾರ್ಂಡೀಸ್, ಜಾರ್ಜ್ ಅವರಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳಾದ ಮಕ್ಸೂದ್ ಅಲಿ ಶೇಖ, ಮಹೇಶ ಪೂಜಾರ್, ಬಸಪ್ಪ ಹರಿಜನ್, ಸುಭಾಸ ಹರಿಜನ್, ದತ್ತಾತ್ರೇಯ ಹೇಂದ್ರೆ, ಲಿಂಗಪ್ಪ ಫೋಳ ಮುಂತಾದವರು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top