ಸಿದ್ದಾಪುರ: ತಾಲೂಕು ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ ಬಸವ ಜಯಂತಿಯನ್ನು ಆಚರಿಸಲಾಯಿತು. ತಹಶಿಲ್ದಾರ ಸಂತೋಷ ಕೆ.ಭಂಡಾರಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಗ್ರಾಮ ಲೆಕ್ಕಿಗ ಹರೀಶ ನಾಯ್ಕ ಬಸವೇಶ್ವರರ ಕುರಿತು ಮಾತಾನಾಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ಎಸ್.ಗೌಡರ, ನಾಗರಾಜ ದೋಶೆಟ್ಟಿ, ಪ.ಪಂ. ಮುಖ್ಯಾಧಿಕಾರಿ ಕುಮಾರ ನಾಯ್ಕ, ಸಿಡಿಪಿಓ ಸುಶೀಲಾ ಮೊಗೇರ, ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ನಾಯ್ಕ, ತಾಲೂಕಾ ಪಂಚಾಯತ ಮ್ಯಾನೇಜರ್, ಪತ್ರಕರ್ತ ರಮೇಶ ಹಾರ್ಸಿಮನೆ ಹಾಗೂ ಕಚೇರಿಯ ಶಿರಸ್ತೆದಾರ ಎನ್.ಐ.ಗೌಡ, ಸಂಗೀತಾ ಭಟ್ ಮತ್ತು ಕಚೇರಿಯ ಸಿಬ್ಬಂದಿ ಹಾಜರಿದ್ದರು.