ಯಲ್ಲಾಪುರ; ತಾಲೂಕಿನ ಉಮ್ಮಚಗಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಇಪ್ಪತ್ತೇಳು ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿರಾದ ಸಿಬ್ಬಂದಿ ರುಕ್ಮಿಣಿ ಎಚ್.ನೇತ್ರೇಕರ ಅವರನ್ನು ಸೋಮವಾರ ಆಯುರ್ವೇದ ಚಿಕಿತ್ಸಾಲಯ ಉಮ್ಮಚ್ಗಿ, ಗ್ರಾಮಪಂಚಾಯತ ಉಮ್ಮಚ್ಗಿ ಇವರ ಆಶ್ರಯದಲ್ಲಿ ಗ್ರಾ.ಪಂ ಸಭಾಭವನದಲ್ಲಿ ಸನ್ಮಾನಿಸಿ ಬಿಳ್ಕೊಡಲಾಯಿತು.
ಡಾ. ಯೋಗೀಶ ಮಡಗಾಂವಕರ್,ಡಾ. ವಾಹಿನಿ, ಅಂಗನವಾಡಿ ಕಾರ್ಯಕರ್ತೆ ವಿಶಾಲು, ಡಾ. ಭಾಗ್ಯಲಕ್ಷ್ಮಿ,ಗ್ರಾ.ಪಂ.ಸದಸ್ಯರಾದ ಗ.ರಾ.ಭಟ್ಟ, ಲಲಿತಾ ವಾಲೀಕಾರ್,ಸರಸ್ವತಿ ಪಟಗಾರ,ಶಿವರಾಜ ನೇತ್ರೆಕರ್, ಉಪಸ್ಥಿತರಿದ್ದರು.
ಗ್ರಾ.ಪಂ ಉಪಾಧ್ಯಕ್ಷ ಶಿವರಾಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಯೋಗ ಶಿಕ್ಷಕ ಗಣಪತಿ ಹೆಗಡೆ ಸ್ವಾಗತಿಸಿದರು.ಡಾ. ಮಂಜುನಾಥ ನಿರ್ವಹಿಸಿ ವಂದಿಸಿದರು.