ಯಲ್ಲಾಪುರ ; ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ಕವಾಳೆಯ ಕಲಾರಾಮ ಕಲ್ಚರಲ್ ಫೌಂಡೇಷನ್ ಆಶ್ರಯದಲ್ಲಿ ಕಲಾರಾಮ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಉದ್ಘಾಟಿಸಿದರು. ಪ್ರಸಕ್ತ ಸಾಲಿನ ಕಲಾರಾಮ ಪ್ರಶಸ್ತಿಯನ್ನು ಹಿರಿಯ ಚಂಡೆವಾದಕ ರಾಮಕೃಷ್ಣ ಮಂದರ್ತಿ ಅವರಿಗೆ ನೀಡಿ ಗೌರವಿಸಲಾಯಿತು. ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ ಅಭಿನಂದನಾ ನುಡಿಗಳನ್ನಾಡಿದರು. ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ನಿವೃತ್ತ ಡಿಡಿಪಿಯು ಕೆ.ಟಿ.ಭಟ್ಟ, ಬಿಲ್ಲಿಗದ್ದೆ ರಾಮಲಿಂಗೇಶ್ವರ ದೇವಸ್ಥಾನದ ಆಡಳಿತ ನಿರ್ವಾಹಕ ಎಲ್.ಪಿ.ಭಟ್ಟ ಗುಂಡ್ಕಲ್, ಸಂಘಟಕ ಎನ್.ಎಸ್.ಭಟ್ಟ, ಇಂಜಿನಿಯರ್ ಎಸ್.ವಿ.ಭಟ್ಟ, ಕಲಾರಾಮ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ ಗಣಪತಿ ಭಾಗ್ವತ ಕವಾಳೆ, ಕಾರ್ಯದರ್ಶಿ ಸಿ.ಡಿ.ಭಟ್ಟ, ರಮೇಶ ಭಾಗ್ವತ ಕವಾಳೆ ಇತರರಿದ್ದರು. ನಾಗರಾಜ ಹೆಗಡೆ ಕವಲಕ್ಕಿ ನಿರ್ವಹಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ‘ಶನಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.