• Slide
    Slide
    Slide
    previous arrow
    next arrow
  • ಇಂದಿನಿಂದ ಶಿರೂರಿನ ಶ್ರೀಕೆರೆ ಬೊಮ್ಮಯ್ಯ ದೇವರ ಅಷ್ಟಬಂಧ ಮಹೋತ್ಸವ

    300x250 AD

    ಅಂಕೋಲಾ: ತಾಲೂಕಿನ ಶಿರೂರು ಗ್ರಾಮದ ಶ್ರೀಕೆರೆ ಬೊಮ್ಮಯ್ಯ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಶ್ರೀಬೊಮ್ಮಯ್ಯ ದೇವರ ಮೂರ್ತಿ ಪುನಃ ಪ್ರತಿಷ್ಠಾ ಮಹೋತ್ಸವ ಮೇ 3ರಿಂದ 5ರವರೆಗೆ ನಡೆಯಲಿದೆ.

    ಈ ಕಾರ್ಯಕ್ರಮವು ಜನವರಿ 22ರಿಂದ 24ರವರೆಗೆ ನಡೆಯಬೇಕಿತ್ತು. ಆ ಸಂದರ್ಭದಲ್ಲಿ ಕೋವಿಡ್ ಲಾಕ್‍ಡೌನ್ ಇದ್ದುದರಿಂದ ಮುಂದೂಡಲ್ಪಟ್ಟಿದ್ದ ಶ್ರೀಬೊಮ್ಮಯ್ಯ ದೇವರ ಮೂರ್ತಿ ಪುನಃ ಪ್ರತಿಷ್ಠಾ ಮಹೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವು ಮೇ 3, 4 ಮತ್ತು 5ರಂದು ಜರುಗಲಿದೆ.

    ಮಂಗಳವಾರ ಬೆಳಿಗ್ಗೆಯಿಂದ ಗಣಪತಿ ಪೂಜೆ, ದೇವತಾ ಪ್ರಾರ್ಥನೆ, ಪುಣ್ಯಾಹ, ಮಾತೃಕಾ ಪೂಜೆ, ದೇವನಾಂದಿ, ಕೃಚ್ಛಾೃಚರಣೆ, ಋತ್ವಿಗ್ವರ್ಣನೆ, ಮಧುಪರ್ಕ, ಕೌತುಕ ಬಂಧನ, ಬಿಂಬಶುದ್ಧಿ ಹೋಮ, ಸಂಜೆ ಯಾಗಶಾಲಾ ಪ್ರವೇಶ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಮಂಟಪ ಸಂಸ್ಕಾರ ಪೂರ್ವಕ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರತಿಷ್ಟಾಂಗ ಕಲಶ ಸ್ಥಾಪನೆ, ಬಿಂಬ ಶುದ್ಧಿಪೂರ್ವಕ ಸಪ್ತಾಧಿವಾಸಗಳು, ಅಗ್ನಿ ಜನನಪೂರ್ವಕ ಪ್ರತಿಷ್ಠೆ ಪೂರ್ವಾಂಗ ಹೋಮಗಳು, ದಿಗ್ಬಲಿ, ಶಯ್ಯಾಧಿ ವಾಸಪೂರ್ವಕ ನಿದ್ರಾ ವಾಹನೆ ನಡೆಯಲಿದೆ.

    ಬುಧವಾರ, ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಹವನ, ಅಧಿವಾಸ ಹವನ, ಬೆಳಿಗ್ಗೆ 10.30ಕ್ಕೆ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಬೊಮ್ಮಯ್ಯ ದೇವರ ಪುನಃ ಪ್ರತಿಷ್ಟೆ , ಶಿಖರ ಸ್ಥಾಪನೆ, ಜೀವ ಕಲಶಾಭಿಷೇಕ ಜೀವಾದಿನ್ಯಾಸಗಳು. ತತ್ವ ಶಕ್ತಿ ಕಲಾ ಹೋಮ, ಪ್ರಾಣಪ್ರತಿಷ್ಟೆ ಹೋಮಗಳು, ಸಂಜೆ ಗಣಪತಿ ಪೂಜೆ ಪುಣ್ಯಾಹ, ನಿರೀಕ್ಷಾ ಪೂಜೆ, ಮಹಾಬಲಿ ನಡೆಯಲಿದೆ.

    300x250 AD

    ಮೇ 5ರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಅವಶಿಷ್ಟ ಹೋಮಗಳು, ಮಹಾಶಾಂತಿ ಮಹಾಪ್ರಾಯಶ್ಚಿತ್ತ ಹವನ, ಮೂಲ ಮಂತ್ರ ಹವನ, ಮಹಾ ಪೂರ್ಣಾಹುತಿ, ಪೂರ್ಣಕಲಾ ಸಾನಿಧ್ಯ, ಕುಂಬಾಭಿಷೇಕ , ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ, ಬ್ರಾಹ್ಮಣಾಶೀರ್ವಾದ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ.

    ಈ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆ ಸಮರ್ಪಿಸುವವರು ಮೇ 4ರ ಒಳಗೆ ಶ್ರೀದೇವರ ಸನ್ನಿಧಾನಕ್ಕೆ ಒಪ್ಪಿಸಬಹುದಾಗಿದ್ದು, 5ರಂದು ಬೆಳಿಗ್ಗೆ 10 ಗಂಟೆಯಿಂದ ಮಹಾಪೂಜೆ ವರೆಗೆ ವೈಯಕ್ತಿವಾಗಿ ಪೂರ್ಣಾಹುತಿಗೆ ಕಾಯಿ, ಫಲ, ನವಧಾನ್ಯ, ತುಪ್ಪ, ಹಾಲು, ವಸ್ತ್ರ, ಕಣ ಇತ್ಯಾದಿಗಳನ್ನು ಹಾಕುವವರಿಗೆ ಅವಕಾಶವಿದೆ. ಕಾರ್ಯಕ್ರಮದ ಅಂಗವಾಗಿ 5ರ ರಾತ್ರಿ 10 ಗಂಟೆಯಿಂದ ನುರಿತ ಕಲಾವಿದರಿಂದ ದಮಯಂತಿ ಪುನರ್ ಸ್ವಯಂವರ ಹಾಗೂ ಕರ್ಣ ಪರ್ವ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಮೂರು ದಿನಗಳವರೆಗೆ ನಡೆಯುವ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀಕೆರೆ ಬೊಮ್ಮಯ್ಯ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top