• first
  second
  third
  Slide
  previous arrow
  next arrow
 • ‘ರೈತ ಉತ್ಪಾದಕ ಕಂಪನಿ’ಯಿಂದ ರೈತರ ಸಮಸ್ಯೆಗೆ ಪರಿಹಾರ-ಆರ್ವಿಡಿ

  300x250 AD

  ಜೊಯಿಡಾ:ತಾಲೂಕಿನ ಕುಂಬಾರವಾಡಾದ ಅಂಬೇಡ್ಕರ್ ಭವನದಲ್ಲಿ ಕಾಳಿ ರೈತ ಉತ್ಪಾದಕ ಕಂಪನಿಯ ಕಾರ್ಯಕ್ರಮನ್ನು ಶಾಸಕ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ರೈತ ಈ ದೇಶದ ಆಸ್ತಿಯಾಗಿದ್ದಾನೆ. ರೈತರ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಬೇಕು. ಕುಂಬಾರವಾಡಾದಂತಹ ಹಳ್ಳಿಯಲ್ಲಿ ಇಲ್ಲಿನ ಜನರು ಸೇರಿ ಕಾಳಿ ರೈತ ಉತ್ಪಾದಕ ಕಂಪನಿ ತೆರೆದಿರುವುದು ಸಂತಸದ ವಿಷಯ ಎಂದು ಹೇಳಿದರು.

  ಜೊಯಿಡಾ ತಾಲೂಕು ಸಂಪದ್ಭರಿತವಾಗಿದೆ. ಇಲ್ಲಿನ ಜನರು ಸಾವಯುವ ಕೃಷಿ ಮಾಡುತ್ತಾರೆ. ಇಲ್ಲಿನ ರೈತರಿಗೆ ಮಾರಕಟ್ಟೆ ಸಮಸ್ಯೆ ಇದೆ. ಸಾವಿರಾರು ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಸಮಸ್ಯೆ ಎದುರಿಸಿದ್ದಾರೆ ಎಂದರು.

  ವಿವಿಧ ಕಾಮಗಾರಿಗಳಿಗೆ ಚಾಲನೆ: ಉಳವಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ದೇಶಪಾಂಡೆ, ಉಳವಿಯ ನೂತನ ಜಾಮಿಯಾ ಮಸೀದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಉಳವಿ ಬಸವಣ್ಣನವರ ಪೂಣ್ಯ ಭೂಮಿ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಬಹಳಷ್ಟು ಅನುದಾನಗಳನ್ನು ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಲ್ಲಿ ನೀಡಲಾಗಿದೆ. ತಾಲೂಕಿನಲ್ಲಿ ಜನರು ಕಾಡಿನಲ್ಲಿ ವಾಸಿಸುತ್ತಾರೆ. ಹೀಗಾಗಿ ಇಲ್ಲಿನ ಜನರ ಆರೋಗ್ಯ ಉತ್ತಮವಾಗಿದೆ. ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ನಾನು ಹೆಚ್ಚಿನ ಮಹತ್ವವನ್ನು ನೀಡುತ್ತೇನೆ ಎಂದರು.

  300x250 AD

  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಮಾಜಿ ಜಿ.ಪಂ. ಸದಸ್ಯ ರಮೇಶ ನಾಯ್ಕ, ಮಂಗೇಶ ಕಾಮತ್, ಶಾಂತಾರಾಮ್ ಕಾಮತ್, ಉಳವಿ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಹಾಗೂ ನೂರಾರು ಸಾರ್ವಜನಿಕರು ಇದ್ದರು

  Share This
  300x250 AD
  300x250 AD
  300x250 AD
  Back to top