ಶಿರಸಿ: ತಾಲೂಕಿನ ಬನವಾಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗನಕಟ್ಟಿ ಕೆರೆಯನ್ನು ಪಂಚಾಯ್ತಿ ಹಾಗೂ ಸ್ಥಳೀಯ ರೈತರ ಸಹಕಾರದಿಂದ ಮನುವಿಕಾಸ ಸಂಸ್ಥೆಯವರು ಅಚ್ಚುಕಟ್ಟಾಗಿ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ವಿಶ್ವನಾಥ ಹಾದಿಮನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕೆರೆಯ ಹೂಳೆತ್ತುವ ಕೆಲಸವು ಕಳೆದ 70 ವರ್ಷಗಳಿಂದ ಆಗಿಲ್ಲ. ಈ ಕೆರೆ ಹೂಳೆತ್ತುವುದರಿಂದ ರೈತರ ಬೆಳೆಗಳಿಗೆ ಹಾಗೂ ದನಕರುಗಳಿಗೆ ಕುಡಿಯುವುದಕ್ಕೆ ಬಹಳ ಅನುಕೂಲಕರವಾಗುತ್ತದೆ ಅಲ್ಲದೇ ಸುತ್ತಮುತ್ತಲಿನ ಭಾಗಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ ಎಂದು ರೈತರಾದ ಹನುಮಂತಪ್ಪ ನೆರೂರ, ದೇವೇಂದ್ರ ಹಾದಿಮನೆ, ಚಂದ್ರಪ್ಪ ಮರಾಠಿ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನುವಿಕಾಸ ಸಂಸ್ಥೆಯ ಈ ಕೆಲಸ ಶ್ಲಾಘನೀಯ. ಸುಮಾರು 80 ರಿಂದ 100 ಎಕರೆ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಲಿದೆ ಎಂದು ವಿಶ್ವನಾಥ ಹಾದಿಮನಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.