• first
  second
  third
  Slide
  previous arrow
  next arrow
 • ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಗಣನೀಯ: ಡಾ.ಜನಾರ್ಧನ

  300x250 AD

  ಭಟ್ಕಳ: ದೇಶದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಕಾರ್ಮಿಕರ ಪಾತ್ರ ಗಣನೀಯವಾದುದು. ಕಾರ್ಮಿಕರ ಸ್ಥಾನಮಾನ ಸಹ ವೃತ್ತಿರಂಗದ ಕೆಲಸಗಾರರಂತೆಯೇ ನಡೆಸಿಕೊಳ್ಳಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ.ಜನಾರ್ಧನ ಮೊಗೇರ ಹೇಳಿದರು.

  ಸ್ವಾತಿ ಪಾಲಿಕ್ಲಿನಿಕ್ ಹಾಗೂ ಸುಷ್ಮ ಲ್ಯಾಬೋರೇಟರಿ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಪಟ್ಟಣದ ಆಟೋ ಚಾಲಕರಿಗೆ ಮೇ 31ರವರೆಗೆ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕಾರ್ಮಿಕ ದಿನಾಚರಣೆಯೊಂದು ಅರ್ಥಪೂರ್ಣ ದಿನವಾಗಿದ್ದು, ಈ ದಿನವನ್ನು ಕಾರ್ಮಿಕರಿಗಾಗಿಯೇ ಮುಡಿಪಾಗಿಟ್ಟು ಅವರನ್ನು ಗೌರವಿಸಬೇಕು. ನಮ್ಮ ದೇಶದಲ್ಲಿ ನ್ಯಾಯಾಂಗ, ಕಾರ್ಯಂಗ, ಶಾಸಕಾಂಗ ಹಾಗೂ ಪತ್ರಿಕಾರಂಗ ಇದರ ಜತೆಗೆ ದೇಶದ ಅಭಿವೃದ್ಧಿಗೆ ಕಾರ್ಮಿಕರಿಗೂ ಒಂದು ಉತ್ತಮ ಸ್ಥಾನ ಮಾನ ಸಿಗಬೇಕು. ಅವರ ಸೇವೆ ಕೂಡ ಅತ್ಯಂತ ಪ್ರಮುಖವಾಗಿದ್ದು, ಆದರೆ ಇಂದು ದೇಶದಲ್ಲಿ ಕಾರ್ಮಿಕರನ್ನು ಎಷ್ಟರ ಮಟ್ಟಿಗೆ ಅವರ ಕೆಲಸವನ್ನು ಗೌರವಿಸುತ್ತಿದ್ದೇವೆ ಎನ್ನುವುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಎಲ್ಲಾ ವರ್ಗದ ಕಾರ್ಮಿಕರು ಸಂಬಳಕ್ಕಾಗಿ ದುಡಿಯುತ್ತಾರೆ ಜೊತೆಗೆ ಅವರ ಕೆಲಸಕ್ಕೊಂದು ಮಾನ್ಯತೆ ಸಿಗಬೇಕು ಎಂದರು.

  ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಸಹಾಯದ ವಿಚಾರದಲ್ಲಿ ನೆನಪು ಮಾಡಿಕೊಳ್ಳುವುದು ಎಂದರೆ ಆಟೋ ಚಾಲಕರಾಗಿದ್ದಾರೆ. ಕಟ್ಟಕಡೆಯ ವ್ಯಕ್ತಿಯನ್ನು ತಲುಪಬಲ್ಲ ನಿಜವಾದ ಕಾರ್ಮಿಕ ಎಂದರೆ ಅವರೇ ಆಟೋ ಚಾಲಕರು. ಇಂತಹ ಸಂದರ್ಭದಲ್ಲಿಯೂ ಸಹ ಆಟೋ ಚಾಲಕರ ಆರೋಗ್ಯದ ಬಗ್ಗೆ ಕಾಳಜಿ ಹೊತ್ತು ಅವರಿಗಾಗಿ ಉಚಿತ ತಪಾಸಣೆ ರಕ್ತದೊತ್ತಡ ಸಕ್ಕರೆ ಖಾಯಿಲೆ ಪರೀಕ್ಷೆಯನ್ನು ನಡೆಸಿರುವುದು ಸಂತಸವಾಗುತ್ತದೆ. ನಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದರು.

  300x250 AD

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಆಯೋಜಕರಾದ ಡಾ.ಶೈಲೇಶ ಮಾತನಾಡಿ, ಕರಾವಳಿ ಭಾಗದ ಆಟೋ ರಿಕ್ಷಾ ಚಾಲಕರು ಬಹುಬೇಗ ಇಷ್ಟವಾಗುತ್ತಾರೆ. ಕಾರಣ ಎಲ್ಲರನ್ನು ಅವರು ಅತ್ಯಂತ ಪ್ರೀತಿಯಿಂದ ತಮ್ಮ ಆಟೋದಲ್ಲಿ ಕೂರಿಸಿಕೊಂಡು ವಿಳಾಸಕ್ಕೆ ಬಿಡುತ್ತಾರೆ. ಇಂತಹ ಶ್ರಮಜೀವಿಗಳಿಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ನಾವು ಮಾಡಬೇಕೆಂಬ ಆಸೆ ಇತ್ತು. ಅದರಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಇದರ ಉಪಯುಕ್ತತೆಯನ್ನು ಆಟೋ ರಿಕ್ಷಾ ಚಾಲಕರು ಪಡೆದುಕೊಂಡು ಆರೋಗ್ಯದ ಕಾಳಜಿ ಹೊಂದಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದರು.

  ಈ ಸಂದರ್ಭದಲ್ಲಿ ವಕೀಲ ಆರ್.ಜಿ.ನಾಯ್ಕ, ಪತ್ರಕರ್ತ ವಿಷ್ಣು ದೇವಾಡಿಗ ಮುಂತಾದವರು ಇದ್ದರು. ನಂತರ ಇಲ್ಲಿನ ಆಟೋ ರಿಕ್ಷಾ ಚಾಲಕರಿಗೆ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಲಾಯಿತು.

  Share This
  300x250 AD
  300x250 AD
  300x250 AD
  Back to top