• Slide
  Slide
  Slide
  previous arrow
  next arrow
 • ಇಂದು ಸ್ವರ್ಣವಲ್ಲೀ ಶ್ರೀಗಳ ಅಮೃತ ಹಸ್ತದಿಂದ TMS ಗ್ರೇಡಿಂಗ್ ವಿಭಾಗದ ನೂತನ ಕಟ್ಟಡ ಲೋಕಾರ್ಪಣೆ

  300x250 AD

  ಶಿರಸಿ: ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿ.ಎಂ.ಎಸ್.)ನ ಗ್ರೇಡಿಂಗ್ ವಿಭಾಗದ ನೂತನ ಕಟ್ಟಡ ಮೇ 3, ಮಂಗಳವಾರ ಸಂಜೆ 4.30ಕ್ಕೆ ಲೋಕಾರ್ಪಣೆಯಾಗಲಿದೆ.

  ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾರಂಭವಾಗುತ್ತಿರುವ ಗ್ರೇಡಿಂಗ್ ವಿಭಾಗದ‌ ನೂತನ ಕಟ್ಟಡವು ಪರಮಪೂಜ್ಯ ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಮಹಾಸ್ವಾಮಿಗಳ ಅಮೃತಹಸ್ತದಿಂದ ನೆರವೇರಲಿದ್ದು, ಜರಡಿ ಮಷಿನ್ ನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟಿಸುವರು.

  ಕಾರ್ಯಕ್ರಮದ‌ ಅಧ್ಯಕ್ಷರಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಲಿದ್ದು, ಹಿರಿಯ ಸಹಕಾರಿಗಳಾದ ಆರ್.ಎಂ.ಹೆಗಡೆ ಬಾಳೇಸರ, ಶಂಭುಲಿಂಗ ಹೆಗಡೆ, ಎಪಿಎಂಸಿ ಅಧ್ಯಕ್ಷ ಶಿವಕುಮಾರ ಗೌಡ, ಪ್ರಭಾರಿ ಉಪನಿಬಂಧಕ ನಾಗರಾಜು ಎಸ್, ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೋಡಿಗೌಡ ಉಪಸ್ಥಿತರಿರುವರು.

  ಟಿ.ಎಂ.ಎಸ್. ಸಂಸ್ಥೆ ನಡೆದು ಬಂದ ಹಾದಿ : ಯಶಸ್ವಿಯಾಗಿ 37 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಟಿಎಂಎಸ್ ಸಂಸ್ಥೆಯು ಮೇ.17, 1985ರಂದು ಕಾರ್ಯಾರಂಭ ಮಾಡಿ ಅಡಿಕೆ, ಕಾಳುಮೆಣಸಿನ ಬೆಳೆಗಾರರಿಗೆ ಯೋಗ್ಯ ಮಾರುಕಟ್ಟೆ ಸೌಲಭ್ಯ ಒದಗಿಸುವುದರೊಂದಿಗೆ ಸಂಘವು ಟೆಂಡರಿನಲ್ಲಿ ಭಾಗವಹಿಸಿ ಮಹಸೂಲು ಖರೀದಿಸಿ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಧಾರಣೆ ನೀಡುತ್ತ ಸದಸ್ಯರಿಗೆ ಅವಶ್ಯವುಳ್ಳ ಎಲ್ಲ ಸೇವಾ ಸವಲತ್ತುಗಳನ್ನು ನೀಡುತ್ತಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಎ.ಪಿ.ಎಂ.ಸಿಯಿಂದ ಸ್ಥಳವನ್ನು ಪಡೆದು ಸುಸಜ್ಜಿತವಾದ ಆಫೀಸು ಕಟ್ಟಡ, ವಿಶಾಲವಾದ ಸೇಲ್ ಯಾರ್ಡ ಹಾಗೂ ನೆಲಮಳಿಗೆ(ಸೆಲ್ಲರ್), ಮಹಡಿ ಕಟ್ಟಡದೊಂದಿಗೆ ಹೆಚ್ಚಿನ ಗೋಡೌನ್ ಸೌಲಭ್ಯವನ್ನು ಕಲ್ಪಿಸಿಕೊಂಡಿದ್ದು ರೈತರ ಹಾಗೂ ವ್ಯಾಪಾರಸ್ಥರ ಅಡಿಕೆ, ಕಾಳುಮೆಣಸಿನ ಶಿಲ್ಕಿಗೆ ಅತ್ಯುತ್ತಮವಾದ ವ್ಯವಸ್ಥೆಯೊಂದಿಗೆ,ಯಾವುದೇ ಶುಲ್ಕ ಮಾಡದೇ ಮಹಸೂಲು ಹಾಳಾಗದಂತೆ ಕಾಲಕಾಲಕ್ಕೆ ದೂವಾ, ಫ್ಯುಮಿಗೇಶನ್ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.

  ಈ ವರ್ಷ ಸಂಘದ ಮೂಲಕ 70000 ಸಾವಿರ ಕ್ವಿಂಟಲ್‍ಗಳಿಗಿಂತಲೂ ಹೆಚ್ಚಿನ ಮಹಸೂಲು ವಿಕ್ರಿಯಾಗಿದ್ದು ವರ್ಷದಿಂದ ವರ್ಷಕ್ಕೆ ಸಂಘದ ವ್ಯವಹಾರ ವೃದ್ಧಿಗೊಳ್ಳುತ್ತ ಬಂದಿದ್ದು, ವಾರ್ಷಿಕ ವಹಿವಾಟು(ಟರ್ನ್ ಓವರ್ ) ರೂ.380.25 ಕೋಟಿಗಳಿಗೂ ಮೀರಿದ್ದು ಸಂಘದಲ್ಲಿ ನೇರವಾಗಿ ಅಥವಾ ಪ್ರಾಥಮಿಕ ಸಹಕಾರ ಸಂಘಗಳ ವ್ಯವಹರಿಸುವ ಸದಸ್ಯರಿಗೆ ಹಲವಾರು ಯೋಜನೆಗಳ ಮೂಲಕ ಅನುಕೂಲ ಕಲ್ಪಿಸಿಕೊಡಲಾಗಿದೆ.

  ಸಂಸ್ಥೆಯ ಇನ್ನಿತರ ಸೌಲಭ್ಯಗಳು:

  • ಸುಪರ್ ಮಾರ್ಟ ವ್ಯವಹಾರ:- ಸದಸ್ಯರ ಬಹುದಿನಗಳ ಬೇಡಿಕೆಯಂತೆ ಸುಸಜ್ಜಿತವಾದ ಸೂಪರ್ ಮಾರ್ಟ್ ವ್ಯವಹಾರ ಪ್ರಾರಂಬಿಸಿದ್ದು ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ.
  • ಆರೋಗ್ಯ ಸುರಕ್ಷಾ ಯೋಜನೆ : ಈ ಯೋಜನೆಯ ಮೂಲಕ ಸದಸ್ಯರು ಅಥವಾ ಅವರ ಕುಟುಂಬದ ಸದಸ್ಯರಿಗೆ ಅನಾರೋಗ್ಯ ಅಥವಾ ಅಫಘಾತವಾದ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚುವೆಚ್ಚ ಭರಿಸಲು ಧನ ಸಹಾಯ ನೀಡಲು ಜಾರಿಗೊಳಿಸಿದ ಈ ಯೋಜನೆಯ ಮೂಲಕ ಖರ್ಚುವೆಚ್ಚದ ಶೇ.50 ರಷ್ಟು ಗರಿಷ್ಠ ಒಂದು ಕುಟುಂಬಕ್ಕೆ ರೂ.1,00,000/- ಧನ ಸಹಾಯ ನೀಡಲಾಗುತ್ತಿದೆ. 2021-22ನೇ ಸಾಲಿನಲ್ಲಿ ಈ ಯೋಜನೆಯ ಮೂಲಕ ರೂ.71,47,700.00 ಧನ ಸಹಾಯ ನೀಡಲಾಗಿದೆ.
  • ಮಹಸೂಲು ವಿಕ್ರಿಗೆ ಪ್ರೋತ್ಸಾಹಧನ :- ಸದಸ್ಯರಿಗೆ ಹಾಗೂ ಸದಸ್ಯ ಸಂಘಗಳಿಗೆ ಮಹಸೂಲು ವಿಕ್ರಿಯ ಆದಾರದ ಮೇಲೆ ಪ್ರೋತ್ಸಾಹಧನ(ರಿಬೇಟ) ನೀಡುತ್ತಿದ್ದು 2021-22ನೇ ಸಾಲಿನಲ್ಲಿ ಅಂತೂ ರೂ. 1,09,84,642.00 ಗಳಷ್ಟು ರಿಬೇಟ್ ರಕಂ ನೀಡಲಾಗಿದೆ.
  • ಮರಣೋತ್ತರ ನಿಧಿ ಯೋಜನೆ : ಟಿ. ಎಂ. ಎಸ್ ನಲ್ಲಿ ಸಕ್ರೀಯವಾಗಿ ವ್ಯವಹರಿಸುವ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಮರಣೋತ್ತರ ನಿದಿಯಿಂದ ಮೃತ ಕುಟುಂಭಕ್ಕೆ ರೂ. 10,000/- ಧನ ಸಹಾಯ ನೀಡಲಾಗುತ್ತಿದೆ.
  • ‘ಅಫಘಾತ ವಿಮಾ ಯೋಜನೆ’ : ಸದಸ್ಯರ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುವ ಕೊನೆಗೌಡರ ಯೋಗಕ್ಷೇಮವನ್ನು ಲಕ್ಷ್ಯದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಿದ್ದು ಕೊನೆ ಕೊಯ್ಯುವಾಗ ಅಥವಾ ಔಷದಿ ಸಿಪಡಿಸುವಾಗ ಮರದಿಂದ ಬಿದ್ದು ಅಪಘಾತವಾದಲ್ಲಿ ಖರ್ಚುವೆಚ್ಚದ ಶೇ.50 ರಷ್ಟು ಗರಿಷ್ಠ ರೂ.50,000/-ನೀಡಲಾಗುತ್ತಿದೆ.

  ಇತರ ವ್ಯವಹಾರ ಅಭಿವೃದ್ದಿ ಕ್ರಮಗಳು :
  ರೈತರು ಹೆಚ್ಚಿನ ಧಾರಣೆ ಪಡೆಯಲು ಶಿಲ್ಕು ಮಾಡಲು ಇಚ್ಛಿಸಿದಲ್ಲಿ ಮಹಸೂಲು ಶಿಲ್ಕಿಗಾಗಿ ಶುಲ್ಕ ರಹಿತ ಗೋಡೌನ್ ವ್ಯವಸ್ಥೆ, ಅಡಿಕೆ ಆರಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಶಿಲ್ಕು ಇರುವ ಮಹಸೂಲು ಹಾಳಾಗದಂತೆ ದುವಾ ಹಾಗೂ ಫ್ಯುಮಿಗೇಶನ್ ಸೌಲಭ್ಯವನ್ನು ಶುಲ್ಕರಹಿತವಾಗಿ ನೀಡಲಾಗುತ್ತಿದೆ. ರೈತರು ಶಿಲ್ಕು ಇಟ್ಟ ಮಹಸೂಲಿನ ಭದ್ರತೆಯ ಮೆಲೆ ಆಗಿಂದಾಗ್ಗೆ ಕಡಿಮೆ ಬಡ್ಡಿದರದಲ್ಲಿ ಮುಂಗಡ ಹಣ ನೀಡುವ ಸವಲತ್ತು ಹಾಗೂ ರೈತರ ಮಹಸೂಲು ಸಾಗಾಟಕ್ಕೆ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ.

  300x250 AD

  ಬಂಗಾರ ದಾಗೀನೆಗಳ ಅಡವಿನ ಭದ್ರತೆಯ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಟಿ.ಎಂ.ಎಸ್. ಬ್ರಾಂಡ್‍ನ ಉತ್ತಮ ಗುಣಮಟ್ಟದ ಪಶು ಆಹಾರ ಹಾಗೂ ಮಿನರಲ್ ಮಿಕ್ಷಚರ್,ಮೇವಚ್ಚು ಹಾಗೂ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸಭೆ ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತವಾದ `ಟಿ.ಎಂ.ಎಸ್. ಸಭಾಭವನ’ವನ್ನು ನಿರ್ಮಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘದಲ್ಲಿ ಕೃಷಿ ಅಧಿಕಾರಿಯನ್ನು ನೇಮಕ ಮಾಡಿಕೊಂಡಿದ್ದು, ಸದಸ್ಯರು ಅದರ ಪ್ರಯೋಜವನ್ನು ಪಡೆದುಕೊಳ್ಳುತ್ತಿದ್ದಾರೆ. ಟಿ.ಎಂ.ಎಸ್.ಸುಪರ್ ಮಾರ್ಟ ವಿಭಾಗವನ್ನು ಪ್ರಾರಂಭಿಸಿದ್ದು ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಿರಾಣಿ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸಲಾಗುತ್ತಿದೆ.

  ಪ್ರಗತಿಯ ಹಾದಿಯಲ್ಲಿ ಟಿಎಂಎಸ್ ಸಂಸ್ಥೆ:
  1985ರಲ್ಲಿ ಕೇವಲ 41 ಸದಸ್ಯರು, ರೂ. 50,800/- ಶೇರು ಬಂಡವಾಳದೊಂದಿಗೆ ಚಿಕ್ಕ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಂಸ್ಥೆ ಈ 37 ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿ ಕಂಡಿದೆ. ಪ್ರಸ್ತುತ ಸಂಘವು 15,000 ಸದಸ್ಯರನ್ನು ಹೊಂದಿದ್ದು, ಮಾ.31,2022 ರಲ್ಲಿ ಇದ್ದಂತೆ ಸಂಘದ ಶೇರು ಬಂಡವಾಳ ರೂ. 51.30 ಲಕ್ಷ, ನಿಧಿಗಳು ರೂ. 3627.26ಲಕ್ಷ, ಠೇವಣಿಗಳು ರೂ. 7929.38 ಲಕ್ಷ, ದುಡಿಯುವ ಬಂಡವಾಳ ರೂ.18,322.81 ಲಕ್ಷ ಹೊಂದಿದೆ. ಪ್ರತಿ ವರ್ಷವೂ ಆಡಿಟ್ ವರ್ಗೀಕರಣದಲ್ಲಿ `ಅ’ ಶ್ರೇಣಿಯನ್ನೇ ಕಾಯ್ದುಕೊಂಡಿದ್ದು, ಆರಂಭಕ್ಕೂ ಈಗಿನ ಸ್ಥಿತಿಗೂ ತುಲನಾತ್ಮಕ ವಿಶ್ಲೇಷಣೆ ಮಾಡಿದಾಗ ಶೇರು ಬಂಡವಾಳದಲ್ಲಿ ಸುಮಾರು 88 ಪಟ್ಟು ಹೆಚ್ಚಳವಾಗಿರುವುದು ಗೋಚರಿಸುತ್ತದೆ. ಇನ್ನುಳಿದ ವಿಭಾಗಗಳಲ್ಲಿಯೂ ಇಪ್ಪತ್ತರಿಂದ ಐವತ್ತು ಪಟ್ಟು ಹೆಚ್ಚಳವಾಗಿದ್ದು, ಪ್ರಾರಂಭದಿಂದ ಇಲ್ಲಿಯವರೆಗೂ ನಿರಂತರವಾಗಿ ಲಾಭ ಗಳಿಸುತ್ತಲೇ ಬಂದಿರುವುದು ಸಂಘದ ಹೆಗ್ಗಳಿಕೆಯಾಗಿದೆ.

  ಸಂಘದಲ್ಲಿ 2021-22ನೇ ವರ್ಷದಲ್ಲಿ 273.59ಕೋಟಿ ಮೌಲ್ಯದ ಕೃಷಿ ಹುಟ್ಟುವಳಿಗಳನ್ನು ಮಾರಾಟ ಮಾಡಲಾಗಿದ್ದು ವಾರ್ಷಿಕ ವಹಿವಾಟು ರೂ. 380.25 ಕೋಟಿಗಳಷ್ಟಿದೆ. ಸಂಸ್ಥೆಯು ಆರ್ಥಿಕವಾಗಿ ಸುಭದ್ರವಾಗಿದ್ದು,ವ್ಯವಹಾರದಲ್ಲಿನ ಅಚ್ಚುಕಟ್ಟುತನ, ಶಿಸ್ತು, ನಿರ್ಭಿಡೆ, ಪ್ರಾಮಾಣಿಕತೆ ಈ ಪ್ರಗತಿಗೆ ಮೂಲ ಕಾರಣವಾಗಿದೆ. ಸಂಘದ ಪ್ರಗತಿಯ ಚಿತ್ರಣವನ್ನು ನೋಡಿದಾಗ ಸಂಘವು ವರ್ಷದಿಂದ ವರ್ಷಕ್ಕೆ ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟು ಮುನ್ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ.

  ಈ ಎಲ್ಲ ಗಮನಾರ್ಹ ಸಾಧನೆಗಳ ಜೊತೆಗೆ ಸದಸ್ಯರ ಮಹಸೂಲನ್ನು ಟೆಂಡರ್ ವ್ಯವಸ್ಥೆಯಡಿಯಲ್ಲಿ ಸಂಘವು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ರೈತರಿಗೆ ಸ್ಪರ್ದಾತ್ಮಕ ದರ ಲಭಿಸುವಲ್ಲಿ ಸಂಘವು ಮಹತ್ತರ ಪಾತ್ರ ವಹಿಸುತ್ತಿದೆ. ಸಂಘವು ಖರೀದಿಸುತ್ತಿರುವ ಮಹಸೂಲು ಶಿಲ್ಕು ಹಾಗೂ ಗ್ರೇಡಿಂಗ್ ವ್ಯವಹಾರದ ಬಗ್ಗೆ ಗುದಾಮಿನ ಅವಶ್ಯಕತೆ ಉಂಟಾದ ಹಿನ್ನಲೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು(ಅಂದಾಜು 27,200 ಚ.ಅಡಿ ವಿಸ್ತೀರ್ಣ) ನಿರ್ಮಿಸಿದೆ.

  ಈ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲು ಸಂಸ್ಥೆಯು ವಿನಂತಿಸಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top