ಶಿರಸಿ: ಜಿಲ್ಲೆಯ ಪ್ರತಿಷ್ಟಿತ ಬ್ಯಾಂಕ್ ಆಗಿರುವ ಕೆ.ಡಿ.ಸಿ.ಸಿ ಬ್ಯಾಂಕ್ ಇದರ ವೃತ್ತಿಪರ ನಿರ್ದೇಶಕರಾಗಿ ಸಿ.ಎ. ತಿಮ್ಮಯ್ಯ ಹೆಗಡೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಬಿಸ್ಲಕೊಪ್ಪ ಸಮೀಪದ ಉಲ್ಲಾಳದವರಾಗಿರುವ ತಿಮ್ಮಯ್ಯ ಹೆಗಡೆ, ಮ್ಯಾನೆಜ್‌ಮೆಂಟ್ ಪದವಿ ಪಡೆದಿದ್ದು, ಪ್ರಸ್ತುತ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.
ಶಿರಸಿ ಹಾಗು ಬೆಂಗಳೂರಿನಲ್ಲಿ ಕಛೇರಿ ಹೊಂದಿರುವ ಇವರು, ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಇದರ ವೃತ್ತಿಪರ ನಿರ್ದೇಶಕರಾಗಿ ಆಯ್ಕೆಯಾಗಿರುವ ತಿಮ್ಮಯ್ಯನವರಿಗೆ ಅವರ ಹಿತೈಷಿಗಳು, ಮಿತ್ರರು ಶುಭ ಹಾರೈಸಿದ್ದಾರೆ.