ಯಲ್ಲಾಪುರ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ ,ವನವಾಸಿ ಕಲ್ಯಾಣ (ರಿ) ಕರ್ನಾಟಕ ಹಾಗೂ ಜೀವನ್ ವಿಕಾಸ್ ಟ್ರಸ್ಟ್ (ರಿ) ಯಲ್ಲಾಪುರ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆ ಹಿತ್ಲಳ್ಳಿಯಲ್ಲಿ ನಡೆಯುತ್ತಿರುವ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಎಮ್.ಎಲ್.ಸಿ.ಶಾಂತಾರಾಮ ಸಿದ್ದಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
3 ದಿನಗಳ ಕಾಲ ನಡೆಯುವ ಈ ಶಿಬಿರವು ಮಕ್ಕಳಿಗೆ ಶಾಲೆಯ ಪಠ್ಯದಲ್ಲಿರುವ ವಿಷಯಗಳ ಹೊರತು ಹೊಸ ವಿಚಾರಗಳ ಬಗ್ಗೆ ತಿಳಿಸಿ ಅವರ ವ್ಯಕ್ತಿತ್ವದ ವಿಕಾಸಕ್ಕೆ ಸಹಾಯಕವಾಗುವುದು ಎಂದರು.
ಈ ಸಂದರ್ಭದಲ್ಲಿ ಹಿತ್ಲಳ್ಳಿ ಪಂಚಾಯತ ಅಧ್ಯಕ್ಷ ಪ್ರಸನ್ನ ಭಟ್ಟ, ಉಪಾಧ್ಯಕ್ಷೆ ನಿರ್ಮಾಲಾ ನಾಯ್ಕ, ಹಿತ್ಲಳ್ಳಿ ಪ್ರೌಢಶಾಲೆ ಎಸ್.ಡಿ.ಎಮ್.ಸಿ.ಅಧ್ಯಕ್ಷ ಜಿ.ಎಸ್.ಹೆಗಡೆ, ಮುಖ್ಯಾಧ್ಯಾಪಕ ಕಮಲಾಕರ ಭಟ್, ಗ್ರಾಪಂ ಸದಸ್ಯ ಗೋಪಾಲ ಶಾಸ್ತ್ರಿ, ಶ್ರೀಮತಿ ಸುಶೀಲಾ ಸಿದ್ದಿ, ಜೀವನ್ ವಿಕಾಸ್ ಟ್ರಸ್ಟ್ ನ ಉಪಾಧ್ಯಕ್ಷ ಶಂಕರ ಸಿದ್ದಿ, ಪ್ರಮುಖರಾದ ನಾಗೇಂದ್ರ ಭಟ್, ವನವಾಸಿ ಕಲ್ಯಾಣ ಶಿರಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಜೋರೆ, ಕಾರ್ಯಕರ್ತರು, ಶಿಬಿರಾರ್ಥಿಗಳು, ಜೀವನ್ ವಿಕಾಸ್ ಟ್ರಸ್ಟ್ ನ ಟ್ರಸ್ಟಿಗಳು, ಪಾಲಕರು, ಊರ ನಾಗರಿಕರು ಉಪಸ್ಥಿತರಿದ್ದರು.