• first
  second
  third
  Slide
  previous arrow
  next arrow
 • ಅನಂತೋತ್ಸವ; ಕೆರೆಕೈಗೆ ‘ಅನಂತ ಶ್ರೀ’ ಪುರಸ್ಕಾರ

  300x250 AD

  ಶಿರಸಿ: ಸ್ಮರಣೆ ಮಾಡಿದರೆ ಮುಂದಿನ ತಲೆಮಾರು ದಾಟಿಸಲು ಸಾಧ್ಯ ಎಂದು ಪ್ರಸಿದ್ಧ ಚಿತ್ರನಟ ಸುಚೀಂದ್ರ‌ ಪ್ರಸಾದ ಹೇಳಿದರು.
  ಶನಿವಾರ ತಾಲೂಕಿನ ವರ್ಗಾಸರ ಅಭಿನವ ರಂಗ‌ ಮಂದಿರದಲ್ಲಿ ಸಿದ್ದಾಪುರದ ಶ್ರೀಅನಂತ ಕ್ಷಿತಿಜ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಅನಂತೋತ್ಸವ 2022ರಲ್ಲಿ ವಿ.ಉಮಾಕಾಂತ ಭಟ್ಟ ಕೆರೆಕೈ ಅವರಿಗೆ
  ‘ಅನಂತ ಶ್ರೀ’ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.

  ಇಂದು ಸ್ಮರಣೆ ಮಾಡದ ಕಾಲದಲ್ಲಿ ಇದ್ದೇವೆ. ಮೇಲ್ಪಂಕ್ತಿ ಹಾಕಿಕೊಟ್ಟವರು ಹಿರಿಯರು. ಆದರೆ, ನಾವೇ ಕೆಳಗೆ ಸರಿಸಿ ಬಿಡುತ್ತೇವೋ ಎಂಬ ಆತಂಕದಲ್ಲಿ ಇದ್ದೇವೆ ಎಂದೂ ಆತಂಕಿಸಿದರು.ಮುಂದಿನ ತಲೆಮಾರಿಗೆ ಕಲೆ ಹಾಗೂ ವಿದ್ಯೆ ದಾಟಿಸಲು ಗುರುತಿಸುವ ಕಾರ್ಯ ಆಗಬೇಕು. ಸೃತಿ ವಿಸ್ಮೃತಿ ಆಗಿದ್ದೇ ಹೆಚ್ಚಾಗಿದೆ ಎಂದರು.

  ಅನಂತಶ್ರೀ ಪ್ರಶಸ್ತಿ ಪುರಸ್ಕೃತ ವಿ.ಉಮಾಕಾಂತ ಭಟ್ಟ ಕಲಾ ರಂಗಕ್ಕೆ ಒಂದು ಪ್ರೀತಿ ಕೊಟ್ಟರೆ ಸಾಕು. ಅದು ರಸಸ್ವಾದ ಆಗುತ್ತದೆ. ಜೀವನ ರಂಗಕ್ಕೆ ಕೊಟ್ಟ ಅನೇಕ ಪ್ರೀತಿ, ಭಾವ ಕೊಟ್ಟ ನೆಲ ವರ್ಗಾಸರ. ನನ್ನ ಪ್ರೀತಿಯ ಸತ್ವ ಕೊಟ್ಟ ನೆಲದಲ್ಲಿ ಮಾತನ್ನು ಬದುಕಿಸುವ ಶಕ್ತಿ ಇಲ್ಲಿದೆ ಎಂದ ಅವರು, ಪ್ರೀತಿ ಕಲಾವಿದರನ್ನು, ಕಲಾಸಕ್ತರನ್ನು ಒಂದಾಗಿಸುತ್ತದೆ ಎಂದರು.


  ಅಭಿನಂದನಾ‌ ನುಡಿ ಆಡಿದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಉಮಾಕಾಂತ ಭಟ್ಟ ಅವರು ರಾಷ್ಟ್ರ ಮಟ್ಟದ ವ್ಯಕ್ತಿ. ಪಂಡಿತರು. ಅವರಿಗೆ ರಾಜ್ಯೋತ್ಸವ ಬಂದಿಲ್ಲ. ಅದಕ್ಕಿಂತ ಪದ್ಮ ಪ್ರಶಸ್ತಿ ಬರಬೇಕು. ಅವರು ತಾಳಮದ್ದಲೆ, ಸಂಸ್ಕೃತ ಕ್ಷೇತ್ರದ ಅಸಾಧಾರಣ ಪಂಡಿತರು ಎಂದರು.

  ಕರ್ನಾಟಕ ವಿಧಾನ ಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಲೆ, ಸಂಸ್ಕೃತಿ ಉಳಿವಿಗೆ ಇಂಥ‌ ಕಾರ್ಯ ಆಗಬೇಕು. ಜೀವನೋತ್ಸಾಹ ಇಟ್ಟು ಕೆಲಸ ಮಾಡಬೇಕು. ಕೆರೇಕೈ ಅವರು ರಾಜ್ಯ, ರಾಷ್ಟ್ರ ಮಟ್ಟದ ವಿದ್ವಾಂಸರು. ಯುವ ಪೀಳಿಗೆ ಕಲೆ, ಸಂಸ್ಕೃತಿ ಉಳಿಸಿಕೊಳ್ಳುವ ಹಾಗೆ ಆಗಬೇಕು. ಯಕ್ಷಗಾನ, ತಾಳಮದ್ದಲೆ ಸಂಸ್ಕಾರ ರೀತಿಯ ಕಲೆ. ಈ ಕಲೆ ಯುವಕರ ನಡುವೆ ಬರಬೇಕು. ಸರಕಾರ ಕೂಡ ಇನ್ನಷ್ಟು ಪೂರಕ ಪ್ರೋತ್ಸಾಹ ಮಾಡಬೇಕು ಎಂದರು.


  ಕೆರೇಕೈ ಅವರು ಆಡಿದ ನೆಲದಲ್ಲಿ ಈ ಪ್ರಶಸ್ತಿ ಪಡೆಯುವದು ಪದ್ಮಶ್ರೀ ಗಿಂತ ದೊಡ್ಡದು. ಕೆರೇಕೈ ಅವರ ಕೊಡುಗೆ ಈ ಕ್ಷೇತ್ರಕ್ಕೆ ದೊಡ್ಡದು, ಯಕ್ಷಗಾನ ನಮ್ಮ ಜಿಲ್ಲೆಯ ಕೊಡುಗೆ. ಹವ್ಯಕರ ಯಕ್ಷಗಾನ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡ ಕುಮಟಾ ಹೇಳಿದರು.

  ಸೆಲ್ಕೋ ಇಂಡಿಯಾ ಸಿಇಓ ಮೋಹನ ಹೆಗಡೆ ಹೆರವಟ್ಟ, ನೆನಪಿಡುವ ಸಾವಿರ ಮಾತುಗಳನ್ನು ಆಡುವ ಅನಂತ ಹೆಗಡೆ ಅವರು. ರಂಗ ಸ್ಥಳದಲ್ಲಿ ಹಾಡುಗಾರಿಕೆ, ನರ್ತನಗಾರಿಕೆ ಅಪಭ್ರಂಶ ಆದಂತೆ ಅರ್ಥಗಾರಿಕೆ ಕೂಡ ಅಪಭ್ರಂಶ ಆಗಿದೆ ಎಂದು ಆತಂಕಿಸಿದ ಅವರು ಸೂಕ್ಷ್ಮ ಸಂವೇದಿ ಕಲಾವಿದರು. ಸಂಸ್ಕಾರ, ಅಧ್ಯಯನ ಶೀಲತೆ ಮಾಡಿದವರು. ಸೂಕ್ಷ್ಮ ಸಂವೇದಿ ಆಗದೇ ಇದ್ದರೆ ಕಲಾವಿದರೇ ಆಗೋದಿಲ್ಲ ಎಂದರು.

  ವಿದ್ವಾನ್ ದತ್ತಮೂರ್ತಿ ಭಟ್ಟ ಶಿವಮೊಗ್ಗ, ಉಮಾಕಾಂತ ಭಟ್ಟ ಅವರು ಎಂಬ ಶ್ರೆಷ್ಠ ರತ್ನವು ಕೊಳಗಿ ಅನಂತಣ್ಣ ಅವರ ಚೌಕಟ್ಟಿನಿಂದ ಶೋಭಿತವಾಗಿದೆ ಎಂದರು.

  ಕಲಾ ಪೋಷಕ ವರ್ಗಾಸರದ ಆರ್.ಜಿ.ಭಟ್ಟ, ಕೆರೇಕೈ ಅವರಿಗೆ ಪ್ರಶಸ್ತಿ ವರ್ಗಾಸರ, ಪುಟ್ಟಣಮನೆಯಲ್ಲಿ ನಡೆಸುವದು ಹೆಮ್ಮೆ ಎಂದರು.

  300x250 AD

  ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಕೊಳಗಿ ಅಧ್ಯಕ್ಷತೆವಹಿಸಿದ್ದರು. ಹರ್ಷಿತಾ ಹೆಗಡೆ, ಆದಿತ್ಯ ಹೆಗಡೆ, ಅನಿಶಾ ಹೆಗಡೆ ಪ್ರಾರ್ಥಿಸಿದರು. ರಾಜೇಂದ್ರ‌ ಕೊಳಗಿ, ಶಂಕರ ಭಾಗವತ್ ಸಹಕಾರ‌ ನೀಡಿದರು. ಜಿ.ಕೆ.ಭಟ್ಟ ಕಶಿಗೆ ಸ್ವಾಗತಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.

  ಸಮಾಜ ಪ್ರೀತಿ ಇದ್ದರೆ ಸಾಕು. ಅನಂತ ಶ್ರೀ ಪ್ರಶಸ್ತಿಯನ್ನು ಪ್ರೀತಿಯ ಪ್ರಶಸ್ತಿಯೆಂದು ಸ್ವೀಕರಿಸುತ್ತಿದ್ದೇನೆ.-ವಿ.ಉಮಾಕಾಂತ ಭಟ್ಟ‌ ಕೆರೇಕೈ, ಪ್ರಶಸ್ತಿ ಪುರಸ್ಕೃತರು

  ಯಾವ ನಾಡು ಸಮೃದ್ದ ಸಾಹಿತ್ಯ, ಕಲೆಯ ಆರಾಧನೆ ಪರಿಣಾಮಕಾರಿಯಾಗಿ ನಡೆಯಬೇಕು. ಆಗ ಸಮಾಜಕ್ಕೆ ಸಂಸ್ಕಾರ ಸಿಗುತ್ತದೆ.
  -ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

  ಸಬಕೆ ಸಾಥ್ ಯಕ್ಷಗಾನ ವಿಸ್ತರಣೆ ಆಗಬೇಕು. ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಯಕ್ಷಗಾನ ಸಮ್ಮೇಳನ ಆಗುತ್ತಿದೆ. ಸಮ್ಮೇಳನ ಏಲ್ಲಿ ಎಂಬ ಚರ್ಚೆ ನಡೆದಿದೆ.–ಡಾ. ಜಿ.ಎಲ್.ಹೆಗಡೆ, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ

  ಉತ್ತರ ಕನ್ನಡ ಜಿಲ್ಲೆ ಕಲೆ, ಸರಸ್ವತಿ ಇರುವ ಜಿಲ್ಲೆ. ಸಂಸ್ಕೃತಿ ಗೆ ಮಾರು ಹೋಗಿದ್ದೇನೆ–ಸುಚೀಂದ್ರ ಪ್ರಸಾದ, ಪ್ರಸಿದ್ಧ ಚಿತ್ರ ನಟರು

  ಶೀಲ ಸಂಸ್ಕೃತಿ ಉಳಿಸಿಕೊಂಡವರು, ಸೂಕ್ಷ್ಮ ಸಂವೇದಿ ಕಲಾವಿದರು ಕೆರೇಕೈ ಅವರು.-ಮೋಹನ ಭಾಸ್ಕರ ಹೆಗಡೆ ಸಿಇಓ ಸೆಲ್ಕೋ ಇಂಡಿಯಾ

  Share This
  300x250 AD
  300x250 AD
  300x250 AD
  Back to top