ಶಿರಸಿ: ಯಕ್ಷಗಾನದ ಭರವಸೆಯ ತಾರೆ ಮೂಲತಃ ಸಿದ್ದಾಪುರ ತಾಲೂಕಿನ ಲಂಬಾಪುರದ ನವ್ಯ ದತ್ತಾತ್ರಯ ಭಟ್ಟ ಎಂಬಿಎ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ.
ಶಿವಮೊಗ್ಗದ ಪ್ರತಿಷ್ಠಿತ ಡಿ.ವಿ.ಎಸ್.ಕಾಲೇಜಿನ ಸಂಸ್ಕೃತ ಅಧ್ಯಾಪಕ, ಸಂಘಟಕ, ಯಕ್ಷಗಾನ ಕಲಾವಿದ ವಿದ್ವಾನ್ ದತ್ತಮೂರ್ತಿ ಭಟ್, ಸುಜಾತಾ ಭಟ್ ದಂಪತಿಗಳ ಪುತ್ರಿ ನವ್ಯಾ ಯಕ್ಷಗಾನದ ಭರವಸೆಯ ಕಲಾವಿದೆ ಆಗಿದ್ದಾಳೆ. ಸಂಗೀತದಲ್ಲೂ ಆಸಕ್ತಿ ಹೊಂದಿದ ಈಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂ.ಬಿ.ಎ.ಸ್ನಾತಕೋತ್ತರ ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಬೆಂಗಳೂರಿನ ಎಸ್.ಜೆ.ಬಿ.ಆಯ್.ಟಿ. ವಿದ್ಯಾಲಯದ ಘಟಿಕೋತ್ಸವದಲ್ಲಿ ಸನ್ಮಾನಿತಳಾಗಿದ್ದಾಳೆ.