ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಮೇ 7 ರಂದು ಹೊನ್ನಾವರದಲ್ಲಿ ಜರುಗಲಿರುವ ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ಹಿರಿಯ ಸಮಾಜವಾದಿ ಚಿಂತಕ ಕಾಗೋಡ ತಿಮ್ಮಪ್ಪನವರಿಗೆ ಆಹ್ವಾನ ಪತ್ರನೀಡಿ ಆಹ್ವಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 30 ರ ಒಳಗೆ ಸುಪ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರ ಪ್ರಮಾಣ ಪತ್ರ ಸಲ್ಲಿಸುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯ ಪ್ರದೇಶಕ್ಕೆ ಉತ್ತರ ಕನ್ನಡದ ಅರಣ್ಯ ಪ್ರದೇಶವನ್ನು ಸೇರಿಸಲ್ಪಟ್ಟಿರುವ ಹಾಗೂ ಅಪೂರ್ಣ ಅರಣ್ಯ ಹಕ್ಕು ಸಮಿತಿಯಿಂದ ಕಾನೂನು ಬಾಹಿರವಾಗಿ 3 ತಲೆಮಾರಿನ ದಾಖಲೆಗಳನ್ನ ಅರಣ್ಯವಾಸಿಗಳಿಂದ ಒತ್ತಾಯಿಸುವುದನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.