ಜೊಯಿಡಾ: ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಿನಲ್ಲಿ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಅತಿವೃಷ್ಟಿ ಕುರಿತಂತೆ ಪೂರ್ವಸಿದ್ಧತಾ ಸಭೆ ನಡೆಯಿತು.
ಅತಿವೃಷ್ಟಿಯಿಂದ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು, ರಸ್ತೆ ಸಂಪರ್ಕ, ವಿದ್ಯುತ್ ಸಮಸ್ಯೆ, ಗುಡ್ಡ ಕುಸಿತ, ನೆರೆ ಹಾವಳಿ, ಬೆಳೆ ಹಾನಿ, ರೈತರ ಸಮಸ್ಯೆ, ಹಾಗೂ ಎಲ್ಲಾ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು ಈ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ ಸಂಜಯ ಕಾಂಬಳೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸುಷ್ಮಾ ಮಳಿಮಠ, ಪಶು ಇಲಾಖೆಯ ಡಾ.ಪ್ರದೀಪ, ಕ್ರೈಮ್ ಪಿಎಸ್‍ಐ ಮಹಾದೇವಿ ನಾಯಕವಾಡಿ, ಲೋಕೋಪಯೋಗಿ ಇಲಾಕೆ ಜೆ.ಇ ಅರುಣಕುಮಾರ ಇತರರು ಇದ್ದರು.