ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಶ್ರೀ ಸದ್ಗುರು ಗೋವಿಂದ ಶರೀಫ ಶಿವಯೋಗಿಗಳ 17ನೇ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಶುಕ್ರವಾರ ನೇರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಶಿವರಾಮ ಹೆಬ್ಬಾರ್ ವಹಿಸಿದ್ದರು. ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಪಾಟೀಲ ಕಾರ್ಯಕ್ರಮನ್ನು ಉದ್ಘಾಟಿಸಿದರು. ದಿವ್ಯ ಸಾನಿಧ್ಯವನ್ನು ಶಿಶುನಾಳ ಶರೀಫ ಅಜ್ಜರ ಗಿರಿಮೊಮ್ಮಗ ಹುಸೇನಸಾಬ ವಹಿಸಿ ವಿವಾಹ ಜೋಡಿಗಳನ್ನು ಹರಿಸಿ ಮುಂದಿನ ಜೀವನ ಹೇಗೆ ನಡೆಯಬೇಕು ಎಂದು ನವದಂಪತಿಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಸದ್ಗುರು ಗೋವಿಂದ ಶರೀಫ ಶಿವಯೋಗಿಗಳ 17ನೇ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳ ಸಂಘಟಕ ಸಹದೇವ ನಡಿಗೇರಿ ಹಾಗೂ ಮಂಜುನಾಥ ನಡಿಗೇರಿ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಕೆಂಜೋಡಿ ಗಲಿಬಿ, ಮಲ್ಲಿಕಾರ್ಜುನ ಕುಟ್ರಿ, ಬಸವರಾಜ ಸಂಗಮೇಶ್ವರ, ನಬಿಸಾಬ ಬೆಳ್ಳನವರ, ಥಾಮಸ್ ರಾಮು ಲಮಾಣಿ(ಅಗಡಿ) ಸೇರಿದಂತೆ ಇಂದೂರ ಗ್ರಾಮದ ಹಿರಿಯರು ಮುಂತಾದವರು ಇದ್ದರು.