• Slide
    Slide
    Slide
    previous arrow
    next arrow
  • ಮೇ.1 ಕ್ಕೆ ಸೌಹಾರ್ದ ಸ್ನೇಹ ಸಮ್ಮೇಳನ

    300x250 AD

    ಶಿರಸಿ: ಸಾಮಾಜಿಕ ಜಾಲತಾಣವಾದ ಪೇಸ್ಬುಕ್ ನಲ್ಲಿ ಹವ್ಯಕರ ಸೌಹಾರ್ದ ಬಳಗ ಫೇಸ್ಬುಕ್ ಪೇಜ್ ನ ಎರಡನೇ ಸ್ನೇಹ ಸಮ್ಮೇಳನವನ್ನು ಮೇ.1 ರವಿವಾರದಂದು ಶಿರಸಿಯ ಅರಣ್ಯ ನೌಕರರ ಸಭಾಭವನದಲ್ಲಿ ಆಯೋಜಿಸಲಾಗಿದೆ.

    ಇದೊಂದು ಕ್ರಿಯಾತ್ಮಕ ಬಳಗವಾಗಿದ್ದು ವಯಕ್ತಿಕ ಟೀಕೆ, ರಾಜಕೀಯ ಹೀಗೆ ಯಾವುದೇ ರಗಳೆಗೆ ಅವಕಾಶವಿಲ್ಲದೆ, ರಂಗೋಲಿ, ಹಾಡು, ಹಸೆ, ಕವನ, ಚರ್ಚೆ, ಜನಪದ ಹೀಗೆ ಹಲವು ಪ್ರತಿಭಾವಂತರಿಗೆ ಮೀಸಲಿಟ್ಟ ಬಳಗವಾಗಿದೆ.

    ಕಾರ್ಯಕ್ರಮದ ಅತಿಥಿಗಳಾಗಿ ಸಾಹಿತಿ ಡಾ.ಅಜಿತ್ ಹೆಗಡೆ ಹರೀಶಿ ಹಾಗೂ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಉಪಸ್ಥಿತರಿರಲಿದ್ದಾರೆ.

    300x250 AD

    ಎಲ್ಲ ಸದಸ್ಯರ ಮುಖಭೇಟಿ ಹಾಗೂ ಬಳಗ ನಡೆಸಿದ ಹಲವು ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ, ಸದಸ್ಯರಿಂದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಬಳಗದ ಎಲ್ಲ ಸದಸ್ಯರು, ಸದಸ್ಯೇತರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು‌ ಚಂದಗಾಣಿಸಲು ಪ್ರಕಟಣೆಯಲ್ಲಿ ಕೋರಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top