ಸಿದ್ದಾಪುರ:ತಾಲೂಕಿನ ಹಾರ್ಸಿಕಟ್ಟಾದ ಯೂತ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಶುಕ್ರವಾರ ಹಾರ್ಸಿಕಟ್ಟಾದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಉಚಿತ ವಾಲಿಬಾಲ್ ಪಂದ್ಯಾವಳಿಯಲ್ಲಿ ರೈಲ್ವೇಸ್ ತಂಡ ಸೂರ್ನಿ ಫ್ರೆಂಡ್ಸ್ ಕೇರಳ ತಂಡವನ್ನು 25-18 ಹಾಗೂ 25-19 ಅಂಕದ ನೇರ ಸೆಟ್ ನೊಂದಿಗೆ ವಿಜಯಗಳಿಸಿ ಪಂದ್ಯಾವಳಿಯ ಪ್ರಥಮ ಸ್ಥಾನ ಪಡೆದುಕೊಂಡಿದೆ.
ದ್ವಿತೀಯ ಸ್ಥಾನವನ್ನು ಸೂರ್ನಿ ಫ್ರೆಂಡ್ಸ್ ಕೇರಳ, ಮೂರು ಮತ್ತು ನಾಲ್ಕನೇ ಸ್ಥಾನವನ್ನು ಮಂಗಳೂರು ಹಾಗೂ ಹಾಸನ್ ತಂಡ ಹಂಚಿಕೊಂಡವು.
ಬಹುಮಾನ ವಿತರಣೆ: ಪಂದ್ಯ ವಿಜೇತರಿಗೆ ನಿವೃತ್ತ ದೈಹಿಕ ಶಿಕ್ಷಕ ಕೆ.ಟಿ.ನಾಯ್ಕ ಹೇರೂರು, ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯ ದೈಹಿಕ ಶಿಕ್ಷಕ ಮಾಧವ ನಾಯ್ಕ, ಗೋಪಾಲ ಹೆಗಡೆ ಹೂಡೆಹದ್ದ, ಮಹೇಶ ಹೆಗಡೆ ಹೊಸ್ಮನೆ, ಶಶಿಧರ ಪಾಟೀಲ್, ನೂರ್ಲಾಮಿನ್, ಸಂತೋಷ ನಾಯ್ಕ, ಕಾಶೀಂ ಸಾಬ್, ಆರ್.ಡಿ.ನಾಯ್ಕ, ಸುರೇಶ ನಾಯ್ಕ ಬಹುಮಾನವನ್ನು ವಿತರಿಸಿದರು.
ಉದ್ಘಾಟನೆ: ಪಂದ್ಯಾವಳಿಯನ್ನು ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ಹಾಗೂ ಕ್ರೀಡಾಂಗಣವನ್ನು ಶಿರಸಿ ಡಿವೈಎಸ್‍ಪಿ ರವಿ ನಾಯ್ಕ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಜಯಾನಂದ ಪಟಗಾರ ಅಧ್ಯಕ್ಷತೆವಹಿಸಿದ್ದರು. ಭೀಮಣ್ಣ ನಾಯ್ಕ, ಶ್ರೀಪಾದ ಹೆಗಡೆ ಕಡವೆ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಉಪೇಂದ್ರ ಪೈ ಶಿರಸಿ, ಆರ್‍ಎಫ್‍ಓ ಶಿವಾನಂದ ನಿಂಗಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಕೆ.ಜಿ.ನಾಗರಾಜ, ಅಶೋಕ ಹೆಗಡೆ ಹಿರೇಕೈ, ವಿ.ಎನ್.ನಾಯ್ಕ ಬೇಡ್ಕಣಿ,ಕೆ.ಕೆ.ನಾಯ್ಕ, ವಿನಾಯಕ ದೇವಾಸ, ಮಾದೇವಿ ಶೇಟ್ ಹಾರ್ಸಿಕಟ್ಟಾ, ಸಂತೋಷ ಶೆಟ್ಟಿ ಶಿರಸಿ, ಶಶಿಧರ ಪಾಟೀಲ್,ಸತ್ಯಾನಂದ ಪಟಗಾರ, ನಿವೃತ್ತ ಶಿಕ್ಷಕಿ ಮಾದೇವಿ ಪಟಗಾರ, ಕಮಲಾಕರ ನಾಯ್ಕ, ನೂರ್ಲಾಮಿನ್ ಸಾಬ್, ಮುನಾವರ್ ಗುರ್ಕಾರ್ ಸಿದ್ದಾಪುರ, ಅಬ್ದುಲ್ ಸಾಬ್ ಹೇರೂರು, ಸುಬಾಸ್ ನಾಯ್ಕ ಇತರರಿದ್ದರು.
ಜಿಲ್ಲೆಯಲ್ಲಿ ಇದೇ ಮೊದಲಭಾರಿಗೆ ದಕ್ಷಿಣ ವಲಯಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದರಿಂದ ವಿವಿಧ ಕಡೆಯಿಂದ ಆರು ಸಾವಿರಕ್ಕೂ ಹೆಚ್ಚು ಕ್ರೀಡಾಸಕ್ತರು ಪಾಲ್ಗೊಂಡು ಸಂತಸಪಟ್ಟರು. ಪಂದ್ಯಾವಳಿಯಲ್ಲಿ ಆರು ತಂಡಗಳು ಪಾಲ್ಗೊಂಡಿದ್ದವು.
ಎಸ್.ಆರ್.ಹೆಗಡೆ ಕುಂಬಾರಕುಳಿ, ರಮೇಶ ಹೆಗಡೆ ಹಾರ್ಸಿಮನೆ, ರೇಷ್ಮಾ ನಾಯ್ಕ ಹಾರ್ಸಿಕಟ್ಟಾ ಕಾರ್ಯಕ್ರಮ ನಿರ್ವಹಿಸಿದರು.