• Slide
    Slide
    Slide
    previous arrow
    next arrow
  • ಪಕ್ಷಿಗಳ ಆವಾಸಸ್ಥಾನ ರಕ್ಷಣೆಯೇ ಇಂದಿನ ಅಗತ್ಯತೆ- ಡಾ.ಗಣೇಶ ಹೆಗಡೆ

    300x250 AD

    ಸಿರಸಿ: ಪಕ್ಷಿಗಳ ಪ್ರಬೇಧದ ಆಧಾರದ ಮೇಲೆ ಆವಾಸ ಸ್ಥಾನ ನಿಶ್ಚಯವಾಗುವದು. ಫಲ ಭಕ್ಷಕ ಪಕ್ಷಿಗಳಿಗೆ ಹಣ್ಣಿನ ಮರಗಳನ್ನು ನೆಟ್ಟರೆ ಕೀಟ ಭಕ್ಷಕಗಳಿಗೆ ಹುಲ್ಲುಗಾವಲು ಪ್ರದೇಶ ಬೇಕಾಗುವದು. ಪಕ್ಷಿಗಳ ಆವಾಸಸ್ಥಾನ ರಕ್ಷಣೆ ಮಾಡುವದು ಇಂದಿನ ಅಗತ್ಯತೆಯಾಗಿದೆ. ಇಲ್ಲಿ ಎಲ್ಲಕ್ಕಿಂತ ವಿಶೇಷವಾಗಿ ಅವುಗಳ ಆವಾಸದ ಹತ್ತಿರ ನೀರಿನ ಮೂಲಗಳು ಇರಲೇಬೇಕು ಆಗ ಮಾತ್ರ ಪಕ್ಷಿಗಳ ವೈವಿಧ್ಯ ಕಾಪಾಡಲು ಸಾಧ್ಯ ಎಂದು ಯೂತ್ ಫಾರ್ ಸೇವಾ ಶಿರಸಿ ಇದರ ಸಂಚಾಲನ ಸಮಿತಿ ಸದಸ್ಯರು ಪಶುವೈದ್ಯ ಡಾ. ಗಣೇಶ ಹೆಗಡೆ ಹೇಳಿದರು.

    ಅವರು ಮಾರಿಕಾಂಬಾ ವನದಲ್ಲಿ ಯೂತ್ ಫಾರ್ ಸೇವಾ ಏರ್ಪಡಿಸಿದ್ದ (ವಾಟರ್ ಫಾರ್ ಬರ್ಡ್ಸ್) ‘ಪಕ್ಷಿಗಳಿಗಾಗಿ ನೀರು’ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಾ ಭೂಮಿ ನಿರ್ವಹಣೆ ಮತ್ತು ಅರಣ್ಯ ಸಂರಕ್ಷಣೆ ಮಾಡುವ ಯೋಜನೆಗಳು ಪಕ್ಷಿಸ್ನೇಹಿ ತಂತ್ರಗಳಿಂದ ಕೂಡಿರಬೇಕು. ನಗರಗಳು ಬೆಳೆದಂತೆ ಅವುಗಳಿಗೆ ವಾಸಸ್ಥಾನಕ್ಕೆ ಧಕ್ಕೆಯುಂಟಾಗುತ್ತಿದೆ. ಹಾಗಾಗಿ ನಗರಗಳ ಹೊರವಲಯದಲ್ಲಿ ಅರಣ್ಯ ಮತ್ತು ಕೆರೆ ಕುಂಟೆಗಳ ನಿರ್ಮಾಣ ಇಂದು ತೀರ ಅಗತ್ಯವಾಗಿದೆ ಎಂದರು
    .
    ಯೂತ್ ಫಾರ್ ಸೇವಾ ಸಂಚಾಲನಾ ಸಮಿತಿ ಸದಸ್ಯೆ ಸಮೀಕ್ಷಾ ಫಾಯ್ದೆ ಮಾತನಾಡಿ ಪಕ್ಷಿಗಳ ಸಂರಕ್ಷಣೆಯಿಂದ ಬೀಜ ಪ್ರಸರಣವಾಗಿ ಸಹಜ ಅರಣ್ಯ ಬೆಳೆಯಲು ಕಾರಣವಾಗುವದು. ವಿದ್ಯಾರ್ಥಿ ಜೀವನದಲ್ಲಿಯೇ ಮನಸ್ಸಿಗೆ ಪರಿಣಾಮ ಬೀರುವ ಒಳ್ಳೆಯ ಕಾರ್ಯ ಪಕ್ಷಿಗಳಿಗಾಗಿ ನೀರು ಅಭಿಯಾನ ತುಂಬಾ ಶ್ಲಾಘನೀಯ ಎಂದರು.

    ಚಂದ್ರು ಎಸಳೆ ಅವರು ಮಾರಿಕಾಂಬಾ ವನ ನಿರ್ಮಾಣದ ಹಿನ್ನೆಲೆ ಮತ್ತು ಉದ್ದೇಶ ತಿಳಿಸಿದರು.ಕಾರ್ಯಕ್ರಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ಸ್ವಯಂಸೇವಕರು ತಯಾರಿಸಿದ ಪಾತ್ರೆಗಳಲ್ಲಿ ಪಕ್ಷಿಗಳಿಗೆ ನೀರು ಹಾಗೂ ಕಾಳು ಇಟ್ಟು ಮಾರಿಕಾಂಬಾ ವನದಲ್ಲಿ ಗಿಡಗಳಿಗೆ ಜೋಡಿಸಲಾಯಿತು. ವನದಲ್ಲಿನ ಪ್ಲಾಸ್ಟಿಕ್ ಕಸಗಳನ್ನು ಸ್ವಚ್ಚಗೊಳಿಸಲಾಯಿತು. ಅಗ್ನಹೋತ್ರದ ಭಸ್ಮವನ್ನು ಹಾಗೂ ಜೀವಾಮೃತವನ್ನು ಔಷಧ ಸಸ್ಯಗಳಿಗೆ ಸಿಂಪಡಿಸಲಾಯಿತು. ‘ಮಾರಿಕಾಂಬಾ ವನದ’ ನಾಮಫಲಕ ಅನಾವರಣ ಮಾಡಲಾಯಿತು.

    300x250 AD

    ವಿದ್ಯುತ್ ಗುತ್ತಿಗೆದಾರ ಧನಂಜಯ ದಾನೋಜಿ, ತೋಟಗಾರಿಕಾ ಮಹಾವಿದ್ಯಾಲಯದ ಉಪನ್ಯಾಸಕರು ಡಾ. ಶಿವಾನಂದ ಹೊಂಗಲ್ , ಡಾ. ಅಶೋಕ ಹರಸೂರು ಎನ್.ಎಸ್,ಎಸ್ ವಿದ್ಯಾರ್ಥಿ ನಾಯಕ ಭಾರ್ಗವ ಹೆಗಡೆ ಮತ್ತು ಶ್ರೀಲಕ್ಷ್ಮೀ,ಯುತ್ ಫಾರ್ ಸೇವಾ ಸ್ವಯಂಸೇವಕ ದೀಪಕ ಆರೇರ್ , ಸ್ಪೂರ್ತಿ ಗಂಗೋಳ್ಳಿ , ಧನ್ಯಶ್ರೀ ದೇವಾಡಿಗ ಎಸಳೆ ಮತ್ತು ತೋಟಗಾರಿಕಾ ಮಹಾವಿದ್ಯಾಲಯದ 45ಸ್ವಯಂಸೇವಕರು ಪಾಲ್ಗೊಂಡಿದ್ದರು.
    ಯೂತ್ ಫಾರ್ ಸೇವಾ ಸ್ವಯಂಸೇವಕಿ ಭಾರತಿ ಎನ್ ವಂದಿಸಿದರು. ಯೂತ್ ಫಾರ್ ಸೇವಾ ಸಂಯೋಜಕ ಉಮಾಪತಿಭಟ್ಟ್ ಕೆವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top