ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಏ.17ರಂದು ಹೊಲದ ಬೇಲಿ ದಾಟಲು ಹೋಗಿ ವಿದ್ಯುತ್ ಪ್ರವಹಿಸಿ 13 ವರ್ಷದ ಬಾಲಕ ಅಷ್ಪಾಕ ಚಪಾತಿ ಮೃತಪಟ್ಟಿದ್ದ. ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಬೆಳಗ್ಗೆ ಮೃತ ಬಾಲಕನ ಮನೆಗೆ ಭೇಟಿನೀಡಿದರು.
ಬಾಲಕನ ತಂದೆ- ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಅಗಡಿ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಮು ಲಮಾಣಿ ಮುಂತಾದವರು ಇದ್ದರು.