• first
    second
    third
    Slide
    previous arrow
    next arrow
  • ಬೊಮ್ನಳ್ಳಿಯಲ್ಲಿ ಶ್ರೀರಾಮಲಿಂಗೇಶ್ವರ ದೇವರ ಪ್ರತಿಷ್ಟಾ ಮಹೋತ್ಸವ ಸಂಪನ್ನ

    300x250 AD

    ಶಿರಸಿ: ದೇವರ ರೂಪ ಬೇರೆಯಾದರೂ ಶಕ್ತಿ ಸ್ವರೂಪನಾಗಿರುವ ಭಗವಂತ ಒಬ್ಬನೆ ಆಗಿದ್ದಾನೆ. ದೈವತ್ವದ ಪ್ರಕಟೀಕರಣಕ್ಕಾಗಿ ದೇವಸ್ಥಾನವನ್ನು ನಾವು ಕಂಡುಕೊಂಡಿದ್ದೇವೆ ಎಂದು ವಿದ್ವಾನ್ ಗಣಪತಿ ಭಟ್ಟ ಕಿಬ್ಬಳ್ಳಿ ಹೇಳಿದರು.

    ತಾಲೂಕಿನ ಬೊಮ್ನಳ್ಳಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಪರಿವಾರ ರಾಮಲಿಂಗೇಶ್ವರ ಶಕ್ತಿ ದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಬಂಗಾರ ಬಳೆ, ಸರ, ಉಂಗುರದಂತೆ ವಿವಿಧ ರೀತಿಯಲ್ಲಿ ಇರುವಂತೆ ದೇವರೂ ಸಹ ಅನೇಕ ರೂಪದಲ್ಲಿದ್ದರೂ, ಆತನು ಒಬ್ಬನೇ ಆಗಿದ್ದಾನೆ. ನಮ್ಮ ದೃಷ್ಟಾರರು, ಯೋಗಿಗಳು ದೇವರನ್ನು ಕಂಡುಕೊಂಡಿದ್ದಾರೆ. ದೇವರು ಕಾಣುವಂತೆ ತೀವ್ರವಾದ ಅಪೇಕ್ಷೆಯನ್ನು ಇಟ್ಟುಕೊಂಡರೆ ಮಾತ್ರ ದೇವರನ್ನು ಪ್ರತ್ಯಕ್ಷವಾಗಿ ಕಾಣಲು ಸಾಧ್ಯವಿದೆ ಹೇಳಿದರು.

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ನಮಗೆ ನಮ್ಮತನದ ಅಭಿಮಾನ ಹೆಚ್ಚಾಗಿದ್ದು ಪ್ರಕಟೀಕರಣಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಜ್ಞಾನದ ಬೆಳಕನ್ನು ಜಗತ್ತಿಗೆ ನೀಡುವ ಕೆಲಸ ನಮ್ಮಿಂದಾಬೇಕು. ಭಕ್ತಿ ಮಾರ್ಗದಲ್ಲಿ ನಡೆದು ದೇವರನ್ನು ಕಾಣುವ ಕೆಲಸ ಮಾಡಬೇಕು. ಸೃಷ್ಟಿಯಲ್ಲಿರುವ ಪ್ರತಿಯೊಂದೂ ಸಹ ಬ್ರಹ್ಮನ ಅಂಶವಾಗಿದೆ. ಜ್ಞಾನಮಾರ್ಗದ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬೇಕು ಎಂದರು.

    ವಿದ್ವಾನ್ ಕುಮಾರ ಭಟ್ಟ ಕೊಳಗಿಬೀಸ್ ಮಾತನಾಡಿ, ಗ್ರಾಮಸ್ಥರ ಸಂಕಲ್ಪ ಮತ್ತು ನಿಶ್ಚಯದ ಪ್ರತಿಫಲವಾಗಿ ಈ ಊರಿನಲ್ಲಿ ದೇವಾಲಯ ನಿರ್ಮಾಣವಾಗಿದೆ. ಕೇವಲ ದೇವಸ್ಥಾನದ ನಿರ್ಮಾಣ ಮಾತ್ರವಲ್ಲ, ನಿತ್ಯ ದೇವಾಲಯಕ್ಕೆ ನಾವೆಲ್ಲ ಬಂದು ದೇವರ ಸೇವೆಗೆ ಮುಂದಾಗಬೇಕು. ಭಗವಂತನ್ನು ಸೇರುವುದೇ ಭಕ್ತಿಯಾಗಿದೆ ಎಂದರು.

    300x250 AD

    ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ದೇವಾಲಯದ ನಿರ್ಮಾಣದಲ್ಲಿ ಗ್ರಾಮದ ಎಲ್ಲರ ಕೊಡುಗೆ ಮುಖ್ಯವಾಗಿದೆ. ಮುಂದೆಯೂ ಸಹ ಊರಿನ ಎಲ್ಲರೂ ಸಹಕಾರ ನೀಡುವಂತಾಗಲಿ ಎಂದರು.

    ವೇದಿಕೆಯಲ್ಲಿ ಸ್ವರ್ಣವಲ್ಲೀ ಸಂಸ್ಥಾನದ ಉಪಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಇದ್ದರು. ಶ್ರೀಪಾದ ಹೆಗಡೆ ಕಡವೆ ನಿರ್ವಹಿಸಿ,ವಂದಿಸಿದರು

    Share This
    300x250 AD
    300x250 AD
    300x250 AD
    Back to top