ಯಲ್ಲಾಪುರ:- ರಾಷ್ಟ್ರ ಮಟ್ಟದ ಅಬಾಕಸ್ ಪರೀಕ್ಷೆಗೆ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಅನುಶ್ರಿ ಮರಾಠಿ ಹಾಳಬೈಲ ಇವಳು ಆಯ್ಕೆಯಾಗಿದ್ದಾಳೆ.
ಇವಳು ತಾಲೂಕಿನ ಕೊಡಸೆಯ ಶಿವಪ್ಪಾ ಮರಾಠಿ ಮತ್ತು ದೀಪಾ ಮರಾಠಿಯವರ ಪುತ್ರಿಯಾಗಿದ್ದು ಯಲ್ಲಾಪುರದ ಹೋಲಿ ರೋಜರಿ ಶಾಲೆಯ ಮೂರನೆ ತರಗತಿಯಲ್ಲಿ ಓದುತ್ತಿದ್ದಾಳೆ.
ಮೆ 1ರಂದು ನೆಡೆಯಲಿರುವ ಪರೀಕ್ಷೆಗೆ ಕೇರಳದ ತಿರುವಿನಂತಪುರಂ ಗೆ ತೆರಳಲಿದ್ದು ಶಿಕ್ಷಕಿಯಾದ ಜೈನಬಿ ಶೇಖ,ಹಾಗೂ ಅಬಾಕಸ್ ಶಿಕ್ಷಕಿ ಜ್ಯೋತಿ ನಾಯ್ಕ ತರಬೇತಿ ನೀಡಿ ಪರೀಕ್ಷೆಗೆ ಸಜ್ಜುಗೊಳಿಸಿದ್ದಾರೆ.ಇವಳ ಪರೀಕ್ಷೆಗೆ ಶುಭವಾಗಲೆಂದು ಹಾಗೂ ಭವಿಷ್ಯ ಉಜ್ವಲವಾಗಿರಲೆಂದು ಮಾಜಿ ಗ್ರಾ ಪಂ ಅಧ್ಯಕ್ಷ ಲಕ್ಷ್ಮಣ ಮಳೀಕ ಹಾಗೂ ಸಂಸ್ಥೆಯ ಅಧ್ಯಕ್ಷರು,ಸದಸ್ಯರು, ಮುಖ್ಯ ಶಿಕ್ಷಕರು ಶುಭ ಹಾರೈಸಿದ್ದಾರೆ.