• first
  second
  third
  Slide
  previous arrow
  next arrow
 • ಯೋಗಾಭ್ಯಾಸದಿಂದ ಮಾನಸಿಕ, ದೈಹಿಕ ಕ್ಷಮತೆ ಹೆಚ್ಚಳ; ವೇ.ಅನಂತ್ ಭಟ್

  300x250 AD

  ಯಲ್ಲಾಪುರ: ನಿರಂತರವಾದ ಯೋಗಾಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ವೇ.ಅನಂತ ಭಟ್ಟ ಹರಿಮನೆ ಹೇಳಿದರು.

  ಅವರು ಪಟ್ಟಣದ ರವೀಂದ್ರನಗರದಲ್ಲಿ ಓಂಕಾರ ಯೋಗ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಈ ಯೋಗಕೇಂದ್ರ ಜನರ ಆರೋಗ್ಯ ಸುಭದ್ರವಾಗಲು ಬುನಾದಿಯಾಗಲಿ ಎಂದರು. ಯೋಗ ಸಾಧಕರಾದ ವಿನಾಯಕ ಕೊಂಗೆ,ಕನಕಪ್ಪ, ದಿವಾಕರ ಮರಾಠಿ, ಮಂಗಳಗೌರಿ ಭಟ್ಟ ಶಿರಸಿ,ಜಿ.ಎನ್.ಹೆಗಡೆ ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು. ರಕ್ತದಾನಿಗಳ ಗುಂಪಿನ ಫಲಕ ಅನಾವರಣಗೊಳಿಸಲಾಯಿತು.

  300x250 AD

  ಹಿರಿಯರಾದ ಗಣೇಶ ಯಾಜಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪತಂಜಲಿ ಯೋಗ ಸಮಿತಿ ತಾಲೂಕು ಅಧ್ಯಕ್ಷ ವಿ.ಕೆ.ಭಟ್ಟ ಶೀಗೆಪಾಲ, ಸಂಘಟಕರಾದ ಸುಬ್ರಾಯ ಭಟ್ಟ ಆನೆಜಡ್ಡಿ, ಗಾಯತ್ರಿ ಭಟ್ಟ ಇತರರಿದ್ದರು. ನಂತರ ಗಾಯತ್ರಿ ಭಟ್ಟ ಗುಂಜಾವತಿ ಅವರಿಂದ ಹರಿಕಥೆ, ದತ್ತಣ್ಣ ಚಿಟ್ಟೆಪಾಲ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

  Share This
  300x250 AD
  300x250 AD
  300x250 AD
  Back to top