ಕುಮಟಾ: ಅರಣ್ಯ ಅತೀಕ್ರಮಣದಾರರ ಸಮಸ್ಯೆಗಳ ಕುರಿತು ಅರಣ್ಯ ಸಿಬ್ಬಂದಿಗಳೊಂದಿಗೆ ಸಮಾಲೋಚಿಸುವ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅದ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿರುವರು. ಈ ಹಿನ್ನೆಲೆಯಲ್ಲಿ ಆಸಕ್ತ ಅರಣ್ಯ ಅತೀಕ್ರಮಣದಾರರು ಮೇ 3ಮುಂಜಾನೆ 10 ಗಂಟೆಗೆ ಕುಮಟಾ ಮಾಸ್ತಿಕಟ್ಟೆ ದೇವಸ್ಥಾನದ ಆವರಣಕ್ಕೆ ಆಗಮಿಸಬೇಕೆಂದು ಹೋರಾಟಗಾರರ ವೇದಿಕೆ ತಾಲೂಕ ಅದ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ದೌರ್ಜನ್ಯ , ಕಿರುಕುಳ, ಮಾನಸಿಕ ಹಿಂಸೆ, ಅಸಮರ್ಪಕ ಜಿಪಿಎಸ್ ಕಾರ್ಯ ಹಾಗೂ ಹೊನ್ನಾವರದಲ್ಲಿ ಮೇ 7ರಂದು ಜರುಗಲಿರುವ ಅರಣ್ಯವಾಸಿಗಳ ಸಮಾವೇಶದ ಕುರಿತು ಮಾಹಿತಿ ನೀಡಲಾಗುವುದೆಂದು ಅವರು ಹೇಳಿದ್ದಾರೆ.