• first
    second
    third
    previous arrow
    next arrow
  • ಅಫ್ಘಾನಿಸ್ತಾನದ ಭಯೋತ್ಪಾದಕರು ಮತ್ತು ಮಿಲಿಟರಿ ಉಪಕರಣಗಳು ಕಾಶ್ಮೀರದೊಳಗೆ ದಾರಿ

    300x250 AD

    ಕಂಡುಕೊಳ್ಳುತ್ತಿವೆ: ಭದ್ರತಾ ಸಂಸ್ಥೆ
    ನವದೆಹಲಿ: ಕಾಶ್ಮೀರದಲ್ಲಿ ಅಫ್ಘಾನಿಸ್ಥಾನದ ಸೇನಾ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗುತ್ತಿರುವ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎo ನರವಾಣೆ ತಿಳಿಸಿದ್ದಾರೆ.

    ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗಿನಿoದ, ಅಫ್ಘಾನಿಸ್ತಾನದ ಭಯೋತ್ಪಾದಕರು ಮತ್ತು ಮಿಲಿಟರಿ ಉಪಕರಣಗಳು ಕಾಶ್ಮೀರದೊಳಗೆ ದಾರಿ ಕಂಡುಕೊಳ್ಳುತ್ತಿವೆ ಎಂಬ ಆತಂಕವನ್ನು ಭದ್ರತಾ ಸಂಸ್ಥೆಗಳು ಹೊಂದಿವೆ.
    2000 ದ ದಶಕದ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಇದ್ದಾಗ, ನಾವು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸವನ್ನು ಕಂಡಿದ್ದೇವೆ. ಅಫ್ಘಾನ್ ಭಯೋತ್ಪಾದಕರನ್ನು ಸೆರೆಹಿಡಿದಿದ್ದೇವೆ ಅಥವಾ ಕೊಂದಿದ್ದೇವೆ ಎಂದು ಅವರು ದೆಹಲಿಯಲ್ಲಿ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಕಾರ್ಯಕ್ರಮ ರೈಸಿನಾ ಡೈಲಾಗ್ ನಲ್ಲಿ ಮಾತನಾಡಿದರು.

    300x250 AD

    ಪ್ರಸ್ತುತ ಅಫ್ಘಾನಿಸ್ತಾನದ ಭಯೋತ್ಪಾದಕರು ಇದುವರೆಗೆ ಕಾಶ್ಮೀರಕ್ಕೆ ಬಂದಿಲ್ಲ. ಆದರೆ ಅಲ್ಲಿನ ಆಯುಧಗಳು ಮತ್ತು ಇತರ ಉಪಕರಣಗಳು ಕಾಶ್ಮೀರದಲ್ಲಿ ಕಂಡು ಬರುತ್ತಿರುವ ಸಂಖ್ಯೆಯಲ್ಲಿ ಖಂಡಿತವಾಗಿಯೂ ಹೆಚ್ಚಳವಾಗಿದೆ, ವಿಶೇಷವಾಗಿ ನಾವು ಸೆರೆಹಿಡಿಯುತ್ತಿರುವ ಅಪಾಯಕಾರಿ ಸಾಧನಗಳು ಹೆಚ್ಚುತ್ತಿವೆ ಎಂದಿದ್ದಾರೆ.

    Share This
    300x250 AD
    300x250 AD
    300x250 AD
    Back to top