ಸಿದ್ದಾಪುರ: ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಕಾನಳ್ಳಿಯ ಚೌಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಕಾಗೇರಿ ಮೆರೆದ ಸರಳತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ.ಸಿದ್ದಾಪುರಶಿರಸಿ: ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಕಾನಳ್ಳಿಯ ಚೌಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಕಾಗೇರಿ ಮೆರೆದ ಸರಳತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ.
ದೇವಸ್ಥಾನದ ಭಜನೆ ಕಾರ್ಯಕ್ರಮದಲ್ಲಿ ಎಲ್ಲರಂತೆ ಸಾಲಿನಂತೆ ಕೊನೆಯಲ್ಲಿ ಕುಳಿತು ದೇವಿಯನ್ಮು ಆರಾಧಿಸಿದ ಸ್ಪೀಕರ್ ಕಾಗೇರಿ ನಡೆ ಜನತೆಯ ಪ್ರೀತಿಗೆ ಕಾರಣವಾಗಿದೆ.
ದೇವಾಲಯದ ಆಡಳಿತ ಮಂಡಳಿಯವರು ಕುಳಿತುಕೊಳ್ಳಲು ಖುರ್ಚಿಯನ್ನು ನೀಡಿದರೂ ಸಹ ಅದನ್ನು ನಯವಾಗಿ ತಿರಸ್ಕರಿಸಿ ನೆಲದಲ್ಲಿ ಕುಳಿತು ಭಜನೆ ಮಾಡಿದ್ದಾರೆ. ಕಾಗೇರಿ ಅವರು ಶಾಸಕರಾಗಿ, ಸ್ಪೀಕರ್ ಆಗಿ ನಡೆದುಕೊಳ್ಳದೇ ಆ ದೇವಸ್ಥಾನದ ಭಕ್ತರಲ್ಲಿ ಒಬ್ಬರಾಗಿ ನಡೆದುಕೊಂಡರು ಎಂಬುದು ಜನಸಾಮಾನ್ಯರ ಮಾತಾಗಿದೆ.