ಯಲ್ಲಾಪುರ: ಬ್ಯೂಟಿ ಪಾರ್ಲರ್ ಸಾಧನೆಗಾಗಿ ಮಮತಾ (ನಿಶಾ) ನಾಯ್ಕ ಅವರಿಗೆ ಅಂತರರಾಷ್ಟ್ರೀಯ ಗೋಲ್ಡನ್ ಅಚೀವ್‍ಮೆಂಟ್ ಅವಾರ್ಡ್ ಲಭ್ಯವಾಗಿದೆ.
ಏ.10 ರಂದು ಬೆಂಗಳೂರಿನ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತರಾಷ್ಟ್ರೀಯ ಫ್ಯಾಷನ್ ಡೈರೆಕ್ಟರ್ ಯಶ್, ಸಂಗೀತ ನಿರ್ದೇಶಕ ವಿ.ಮನೋಹರ, ಖ್ಯಾತ ಸರ್ಜನ್ ಡಾ.ಅಂಜಿನಪ್ಪ ಹಾಗೂ ಅಂತರರಾಷ್ಟ್ರೀಯ ಮಾಡೆಲ್ ಸಂತೋಷ ರೆಡ್ಡಿ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಮಮತಾ ನಾಯ್ಕ ಪ್ರಶಸ್ತಿ ಸ್ವೀಕರಿಸಿದರು.
ಬ್ಯೂಟಿ ಪಾರ್ಲರ್ ನಂತಹ ಕ್ಷೇತ್ರದಲ್ಲಿ ಮಹಾನಗರದಲ್ಲಿದ್ದು ಸಾಧನೆ ಮಾಡುವ ಅಗತ್ಯತೆ ಇಲ್ಲ. ಯಲ್ಲಾಪುರದಂತಹ ಸಾಮಾನ್ಯ ಪಟ್ಟಣದಲ್ಲಿಯೂ ಇದ್ದು ಸಾಧನೆ ಮಾಡಬಹುದು ಎನ್ನುವುದಕ್ಕೆ ಮಮತಾ ನಾಯ್ಕ ಸಾಕ್ಷಿಯಾಗಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಸಂಸಾರದ ರಥದೊಂದಿಗೆ ಸಾಧನೆಯ ರಥವನ್ನು ಕಟ್ಟಬಹುದು ಎನ್ನುವಂತೆ ಮಮತಾ ಸಾಧನೆ ಮಾಡಿದ್ದಾರೆ. ಯಶ್ ಇಂಟರನ್ಯಾಷನಲ್ ಫ್ಯಾಷನ್‍ನವರು ಪ್ರತಿ ವರ್ಷ ಫ್ಯಾಷನ್ ಕ್ಷೇತ್ರದಲ್ಲಿ ಕೊಡಮಾಡುವ ಅನೇಕ ಅವಾರ್ಡ್‍ಗಳಲ್ಲಿ ಈ ಅವಾರ್ಡ್ ಕೂಡ ಒಂದು. ಪ್ರಸ್ತುತ ವರ್ಷ ಈ ಅವಾರ್ಡ್ ಯಲ್ಲಾಪುರದ ಕಾಳಮ್ಮನಗರ ನಿವಾಸಿ ನಿಶಾ ಬ್ಯೂಟಿ ಪಾರ್ಲರ್ ತನ್ನದಾಗಿಸಿಕೊಂಡಿದೆ.
ಮಮತಾ ನಾಯ್ಕ ಅವರು ಕುಮಟಾ, ಬೆಳಗಾವಿ, ಹಳಿಯಾಳ, ತುಮಕೂರು, ಬೆಂಗಳೂರು, ಉಡುಪಿ ರೂಡ್ ಸೆಟ್ ಗಳಲ್ಲಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿಗಳನ್ನು 12 ವರ್ಷದಿಂದ ನೀಡುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಮಧ್ಯಮ ವರ್ಗದ ಸಾಮಾನ್ಯ ಮಹಿಳೆ ಮಮತಾ ನಾಯ್ಕ, ಯಲ್ಲಾಪುರದ ಕಾಳಮ್ಮನಗರದಲ್ಲೇ ಕಳೆದ 16 ವರ್ಷಗಳಿಂದ ತಮ್ಮದೇ ಆದ ‘ನಿಶಾ ಬ್ಯೂಟಿ ಪಾರ್ಲರ್’ ಎಂಬ ಹೆಸರಿನ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್ 15ರಂದು ಸ್ಮೃತಿ ಸಾಧನ ಮೆಮೊರೀಸ್ ಅಚೀವ್ಮೆಂಟ್ ಪ್ರೌಡ್ ಇಂಡಿಯನ್ ಅವಾರ್ಡ್ ನ ‘ಬೆಸ್ಟ್ ಮೇಕಪ್ ಆರ್ಟಿಸ್ಟ್’ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.
ಮೇಕಪ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳೆದ 2 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ‘ಮಿಸ್ ಇಂಡಿಯಾ- ಕರ್ನಾಟಕ’ ಪ್ರಥಮ ಬಹುಮಾನ ವಿಜೇತ ಮೋಡೆಲ್‍ಗೆ ಮೇಕಪ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ಕಳೆದ 16 ವರ್ಷಗಳಿಂದ ತನ್ನ ಸಂಸಾರವನ್ನು ನೋಡಿಕೊಳ್ಳುತ್ತಾ ಜೊತೆಗೆ ಮೇಕಪ್ ಆರ್ಟ್‍ನಲ್ಲೂ ಸಾಧನೆಗೈಯ್ಯುತ್ತಾ, ಉತ್ತರಕನ್ನಡ ಜಿಲ್ಲೆಗೆ, ಅದರಲ್ಲೂ ಯಲ್ಲಾಪುರ ತಾಲ್ಲೂಕಿಗೆ ಹೆಮ್ಮೆ ಎಂದು ಹೇಳಬಹುದು. ಅಲ್ಲದೇ ಇವರ ಈ ಸಾಧನೆ ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.