• Slide
    Slide
    Slide
    previous arrow
    next arrow
  • ಮೇ 14, 15ಕ್ಕೆ ‘ಅಂಕೋಲಾ ಸಂಭ್ರಮ- 2022’

    300x250 AD

    ಅಂಕೋಲಾ: ಅಂಕೋಲಾ ಸಂಭ್ರಮವನ್ನು ವಿಭಿನ್ನ ಹಾಗೂ ವೈಭವಪೂರಕವಾಗಿ ಆಚರಿಸಲಾಗುವುದು ಎಂದು ಕ್ಲಬ್ ವಿ ಫಿಟ್ನೆಸ್‍ನ ಸಂಘಟಕರು ತಿಳಿಸಿದ್ದಾರೆ

    ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಸಂಜಯ ನಾಯ್ಕ,ಕ್ಲಬ್ ವಿ ಫಿಟ್ನೆಸ್ ವತಿಯಿಂದ ಮೇ 14 ಮತ್ತು 15ರಂದು ಪಟ್ಟಣದ ಜೈಹಿಂದ್ ಮೈದಾನದಲ್ಲಿ ‘ಅಂಕೋಲಾ ಸಂಭ್ರಮ- 2022’ ಆಯೋಜಿಸಲಾಗಿದ್ದು, ರಾಷ್ಟ್ರ ಮಟ್ಟದ ಡಾನ್ಸ್ ಸ್ಪರ್ಧೆ ಮತ್ತು ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಮೇ 14ರಂದು ಸಂಜೆ 7 ಗಂಟೆಗೆ ಡ್ರಾಪ್ ಬೀಟ್ ಸ್ಟೂಡಿಯೊ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ನೃತ್ಯ ಸಮರ-2022 ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಗ್ರೂಪ್ ವಿಭಾಗ ಮತ್ತು ಸೋಲೊ ವಿಭಾಗಗಳಿದ್ದು ಸೋಲೊ ವಿಭಾಗದಲ್ಲಿ 5 ರಿಂದ 15 ವರ್ಷದ ಕಿರಿಯರ ಮತ್ತು 16 ರಿಂದ 60 ವರ್ಷದ ಹಿರಿಯರ ವಿಭಾಗಕ್ಕೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಗ್ರೂಪ್ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 25 ಸಾವಿರ, ತೃತೀಯ 10 ಸಾವಿರ ರೂಪಾಯಿಗಳನ್ನು ಹಾಗೂ ಎರಡು ಸಮಾಧಾನಕರ ಬಹುಮಾನಗಳು ಇರಲಿದ್ದು, ಸೋಲೊ ವಿಭಾಗದಲ್ಲಿ ಕಿರಿಯರಿಗೆ ಮತ್ತು ಹಿರಿಯರಿಗೆ ಪ್ರತ್ಯೇಕವಾಗಿ ಪ್ರಥಮ ರೂ.7000, ದ್ವಿತೀಯ ರೂ.5000 ಹಾಗೂ ತೃತೀಯ ರೂ.3000 ಬಹುಮಾನ ನೀಡಲಾಗುವುದು ಎಂದರು.

    ಯುಕೆಡಿಎಫ್‍ಎ ಕುಮಟಾ ಸಹಯೋಗದಲ್ಲಿ ಅಂಕೋಲಾದಲ್ಲಿ ಪ್ರಥಮ ಬಾರಿಗೆ ಮೇ 15ರಂದು ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆ ಮಿಸ್ಟರ್ ಬಾರ್ಡೋಲಿ-2022ನ್ನು ಆಯೋಜಿಸಲಾಗಿದೆ. ದೇಹದಾಢ್ರ್ಯ ಸ್ಪರ್ಧೆಯು 7 ವಿಭಾಗಗಳಲ್ಲಿ ನಡೆಯಲಿದ್ದು, ಪ್ರತೀ ವಿಭಾಗದಲ್ಲಿ 5 ಸ್ಥಾನ ಇರಲಿದೆ. ಸ್ಪರ್ಧೆಯು 55 ಕೆಜಿಯಿಂದ 85 ಕೆಜಿವರೆಗಿನ ಪ್ರತೀ 5 ಕೆಜಿ ವಿಭಾಗಕ್ಕೆ ರೂ.11000 ನಗದು, ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಲಾಗುವದು. ಇದಲ್ಲದೆ ಟೈಟಲ್ ಮಿ.ಬಾರ್ಡೋಲಿಗೆ ರೂ.12500, ಫಸ್ಟ್ ರನ್ನರಪ್ ರೂ.7000, ಸೆಕೆಂಡ್ ರನ್ನರಪ್ ರೂ.5000, ಬೆಸ್ಟ್ ಪೆÇೀಸರ್ ರೂ.5000 ನಗದು ಮತ್ತು ಪಾರಿತೋಷಕ ನೀಡಲಾಗುವದು. ದೇಹದಾರ್ಡ್ಯ ಸ್ಪರ್ಧೆಯ ಬಳಿಕ ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯುವದು ತಿಳಿಸಿದ್ದಾರೆ.

    300x250 AD

    ಡ್ಯಾನ್ಸ್ ಸ್ಪರ್ಧೆಯ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 99725 41509, 80735 53279, 63606 82463, 96328 78404, ದೇಹದಾರ್ಡ್ಯ ಸ್ಪರ್ಧೆಗಾಗಿ ಮೊ.ಸಂ: 99008 33434, 63639 11647, 98800 33182ಗೆ ಸಂಪರ್ಕಿಸಲು ಕೋರಲಾಗಿದೆ.

    ಸುದ್ದಿಗೋಷ್ಠಿಯಲ್ಲಿ ಕ್ಲಬ್ ವಿ ಫಿಟ್ನೆಸ್ ಉಪಾಧ್ಯಕ್ಷ ಕಿರಣ ನಾಯ್ಕ, ಕಾರ್ಯದರ್ಶಿ ವಿಘ್ನೇಶ ನಾಯ್ಕ, ಸಂಚಾಲಕ ಮಂಜುನಾಥ ನಾಯ್ಕ, ಸತೀಶ ಮಹಾಲೆ, ಆಸ್ಮಾ ಗೌಡ ಹಾಗೂ ಸಂಘಟನೆಯ ಸರ್ವಸದಸ್ಯರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top