ಸಿದ್ದಾಪುರ; ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಎಸ್.ಎಫ್.ಸಿ ಯೋಜನೆಯಡಿ ಮಂಜೂರಿಯಾದ ರೂ.25 ಲಕ್ಷಗಳ ಎ.ಪಿ.ಎಂ.ಸಿ ಶಾಂತಿನಗರ ರಸ್ತೆಗೆ ಕಾಂಕ್ರೀಟ್ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ರೂ.20 ಲಕ್ಷಗಳ ಐಬಿ ರಸ್ತೆಯಿಂದ ರಾಮೇಶ್ವರ ನಗರಕ್ಕೆ ಹೋಗುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳ ಭೂಮಿ ಪೂಜೆಯನ್ನು ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ವಿಜೇಂದ್ರ ಗೌಡರ, ಮಾರುತಿ ಟಿ.ನಾಯ್ಕ, ಗುರುರಾಜ ಶಾನಭಾಗ, ನಂದನ ಬೋರ್ಕರ್, ಸುರೇಶ ನಾಯ್ಕ ಬಾಲಿಕೊಪ್ಪ, ಮಂಜುನಾಥ ಭಟ್ಟ, ರಾಜೇಂದ್ರ ಕಿಂದ್ರಿ, ಟಿಎಂ.ಎಸ್ ಅಧ್ಯಕ್ಷ ಆರ್.ಎಮ್.ಹೆಗೆಡೆ ಬಾಳೇಸರ ಪ್ರಮುಖರಾದ ಡಾ.ಶ್ರೀಧರ ವೈದ್ಯ, ಜಯವಂತ ಶಾನಭಾಗ ಮೊದಲಾದವರು ಇದ್ದರು.