ಹೊನ್ನಾವರ: ತಾಲೂಕಿನ ಚಿತ್ತಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಕೆಕುಳಿ ಕನ್ನಡ ಶಾಲೆ ಸಂಪರ್ಕಿಸುವ ಸೇತುವೆ ನಿರ್ಮಾಣ ಈ ಭಾಗದವರ ದಶಕಗಳ ಕನಸಾಗಿದ್ದು,25 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಈ ಭಾಗದ ಗ್ರಾಮವನ್ನು ಸೇತುವೆ ಕಾಮಗಾರಿ,ರಸ್ತೆ ನಿರ್ಮಾಣದ ಮೂಲಕ ಇತರೆ ಗ್ರಾಮದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ. ಪಂ. ಸದಸ್ಯರಾದ ಗಣಪತಿ ಗೌಡ ಚಿತ್ತಾರ, ಮೋಹನ ನಾಯ್ಕ, ಮುಖಂಡರಾದ ಶ್ರೀಧರ ನಾಯ್ಕ ಮಂಕಿ, ಗಿರೀಶ ನಾಯ್ಕ ಹಡಿಕಲ್ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.