ಯಲ್ಲಾಪುರ: ವೇದಾಧ್ಯಯನ ದಿಂದ ಉತ್ತಮ ಸಂಸ್ಕಾರದ ಜತೆಗೆ ಬದುಕಿಗೆ ಮಾರ್ಗದರ್ಶನ ಹೊಂದಲು ಸಾಧ್ಯ ಎಂದು ಅಡಿಕೆ ವರ್ತಕ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಹೇಳಿದರು.
ಅವರು ಗುರುವಾರ ತಾಲೂಕಿನ ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಕಾಲೇಜಿನಲ್ಲಿ ನಡೆದ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ವೇದ ಮಂತ್ರಗಳು ಜೀವನದ ದಾರಿ ದೀಪವಾಗಿವೆ. ಅಧ್ಯಯನ ಮಾಡಿರುವುದನ್ನು ಮರೆಯದೇ ನಿರಂತರವಾಗಿ ಜಪಾನುಷ್ಠಾನಗಳಿಂದ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಟಿ. ವಿ. ಹೆಗಡೆ ಹೆಗಡೆ ಬೆದೆಹಕ್ಕಲು ಅಧ್ಯಕ್ಷತೆ ವಹಿಸಿದ್ದರು.ಜಿ. ಜಿ. ಹೆಗಡೆ ಕನೇನಹಳ್ಳಿ, ಎಲ್. ಜಿ ಹೆಗಡೆ ಬೆಳಗುಂದ್ಲಿ, ಪ್ರಾಚಾರ್ಯ ಡಾ. ನಾಗೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.ರಾಮಚಂದ್ರ ಭಟ್ಟ ನಿರೂಪಿಸಿದರು.ಶಂಕರ ಭಟ್ಟ ವಂದಿಸಿದರು.