ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್‌ಗೆ 2020-21ನೇ ಸಾಲಿನ ಅತ್ಯುತ್ತಮ ಸೇವೆಕಾರ್ಯಗಳಿಗಾಗಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್- ಕ್ಲಬ್ ಎಕ್ಸಲೆನ್ಸ್' ಪ್ರಶಸ್ತಿ ನೀಡಿದೆ. ಅದರಂತೆ 2020-21ನೇ ಸಾಲಿನಲ್ಲಿ ಝೋನ್ ಚೇರ್‌ಪರ್ಸನ್ ಎಂ. ಜೆ. ಫ್. ಲಯನ್ ಜ್ಯೋತಿ ಭಟ್ ಅಂತರಾಷ್ಟ್ರೀಯ ಸಂಸ್ಥೆಯಿAದ
ಅತ್ಯುತ್ತಮ ಝೋನ್ ಚೇರ್‌ಪರ್ಸನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿಗಳನ್ನು ಗೋವಾದಲ್ಲಿ ನಡೆದ ಲಯನ್ ಡಿಸ್ಟ್ರಿಕ್ಟ್ 317 ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ತ್ರಿವಿಕ್ರಮ ಪಟವರ್ಧನ ಹಾಗೂ ಜ್ಯೋತಿ ಭಟ್ ಪ್ರಶಸ್ತಿ ಪಡೆದರು. 2020-21ನೇ ಸಾಲಿನಲ್ಲಿ ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೆ. ಬಿ. ಲೋಕೇಶ ಹೆಗಡೆ, ಕಾರ್ಯದರ್ಶಿಗಳಾಗಿ ಲಯನ್ ಅಶ್ವತ್ಥ ಹೆಗಡೆ, ಕೋಶಾಧ್ಯಕ್ಷರಾಗಿ ಲಯನ್ ಅಶೋಕ ಹೆಗಡೆ ಅವರ ಸೇವಾಕಾರ್ಯಗಳು, ಮಾನವೀಯ ಸ್ಪಂದನೆ ಹಾಗೂ ಉತ್ತಮ ಕಾರ್ಯತತ್ಪರತೆಗಾಗಿ ಈ ಪ್ರಶಸ್ತಿಗಳು ಲಭಿಸಿವೆ ಲಯನ್ಸ್ ಕ್ಲಬ್ ತಿಳಿಸಿದೆ.