• Slide
    Slide
    Slide
    previous arrow
    next arrow
  • ಉಪಟಳ ನೀಡುತ್ತಿದ್ದ ಒಂಟಿ ಮಂಗವನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸಾಗಿಸಿದ ಅರಣ್ಯ ಇಲಾಖೆ

    300x250 AD

    ಅಂಕೋಲಾ: ಕಳೆದ ಕೆಲ ದಿನಗಳಿಂದ ಬೊಬ್ರುವಾಡಾ ಗ್ರಾಪಂ ವ್ಯಾಪ್ತಿಯಲ್ಲಿ ಉಪಟಳ ನೀಡಿ, ನಾಗರಿಕರ ನೆಮ್ಮದಿ ಕೆಡಿಸಿದ್ದ ಒಂಟಿ ಮಂಗವನ್ನು,ಸತತ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ತಂಡ,ಸ್ಥಳೀಯರ ಸಹಕಾರ ದಲ್ಲಿ ಸೆರೆ ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸಾಗಿಸಿದೆ.

    ಓರ್ವ ವೃದ್ಧೆ ಹಾಗೂ ಸ್ಥಳೀಯ ಇಂಜಿನಿಯರ್ ಒಬ್ಬರಿಗೂ ಮಂಗ ಘಾಸಿಗೊಳಿಸಿತ್ತು. ಮಂಗನ ಸೆರೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದ ಅರಣ್ಯ ಇಲಾಖೆ ತಂಡ, ಅರವಳಿಕೆ ಇಂಜೆಕ್ಷನ್ ಹಾರಿಸಿ,ಮಂಗನಿಗೆ ಮತ್ತು ಬರುವಂತೆ ಮಾಡಿ ಸೆರೆ ಹಿಡಿದಿದ್ದು, ನಂತರ ಕದ್ರಾ ಬಳಿಯ ವನ್ಯ ಪ್ರದೇಶಕ್ಕೆ ಸಾಗಿಸಿದ್ದಾರೆ ಎನ್ನಲಾಗಿದೆ.

    300x250 AD


    ಈ ಮೂಲಕ ಮಂಗನ ಹುಚ್ಚಾಟದಿಂದ ನೊಂದು -ಬೇಸತ್ತ ಸ್ಥಳೀಯರ ಆತಂಕ ದೂರ ವಾದಂತಿದೆ. ತಮ್ಮಿಂದ ಕೊಂಚ ವಿಳಂಬವಾದರೂ, ಕಾರ್ಯಾಚರಣೆ ಯಶಸ್ಸಿಗೆ ಸಹಕರಿಸಿದ ಸ್ಥಳೀಯರು ಮತ್ತು ಡೇರಿಂಗ್ ಟೀಮ್ ಸದಸ್ಯರು, ಹಾಗೂ ಸಿಬ್ಬಂದಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪ್ರತ್ಯಕ್ಷ -ಅಪ್ರತ್ಯಕ್ಷ ಸಹಕರಿಸಿದ ಸರ್ವರಿಗೂ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ, ಅರಣ್ಯ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top