ಯಲ್ಲಾಪುರ: ರಾಜ್ಯದಲ್ಲಿ ದೂರದೃಷ್ಟಿ ಯೋಜನೆ ತಯಾರಿಕೆ ಹಾಗೂ ವಿಕೇಂದ್ರೀಕರಣ ಯೋಜನೆಯ ಬಲವರ್ಧನೆ ಕುರಿತಂತೆ ಕೇರಳದ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಭಾಗವಹಿಸಿದ್ದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ವಿಷಯ ತಜ್ಞರಾದ ಮೀನಾಕ್ಷಿ ಸುಂದರo, ವಿಕೇಂದ್ರೀಕರಣ ಯೋಜನಾ ಸಮಿತಿಯ ತಜ್ಞ ಸದಸ್ಯರಾದ ಡಿ. ಆರ್. ಪಾಟೀಲ, ಸಿ. ನಾರಾಯಣಸ್ವಾಮಿ, ಕಾಡಶೆಟ್ಟಿಹಳ್ಳಿ ಸತೀಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.