ಕಾರವಾರ: ತಾಲೂಕಿನ ಹೊಸಾಳಿಯಲ್ಲಿ ಬೈಕ್ನಲ್ಲಿ ಚಲಿಸುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿ ಪರಿಣಾಮ ವ್ಯಕ್ತಿ ಗ0ಭೀರ ಗಾಯಗೊಂಡ ಘಟನೆ ನಡೆದಿದೆ.
ಅಸ್ಫೋಟಿಯ ನಿವಾಸಿ ದೀಪಕ ಕಾಶಿನಾಥ ನಾಯ್ಕ ಗಾಯಗೊಂಡ ವ್ಯಕ್ತಿಯಾಗಿದ್ದು ಈತ ಪರಿಚಯಸ್ಥರೊಬ್ಬರ ಮದುವೆ ಮುಗಿಸಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಹೊಸಾಳಿ ಕ್ರಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ವಾಹನ ಬಡಿದ ಪರಿಣಾಮ ಪರಿಣಾಮ ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.