ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದ ಯೂತ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ದಕ್ಷಿಣ ವಲಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಉಚಿತ ವಾಲಿಬಾಲ್ ಪಂದ್ಯಾವಳಿ ಹಾರ್ಸಿಕಟ್ಟಾದಲ್ಲಿ ಏ.29ರಂದು ಸಂಜೆ 6ರಿಂದ ಆರಂಭಗೊಳ್ಳಲಿದೆ ಎಂದು ಪಂದ್ಯಾವಳಿಯ ಸ್ವಾಗತ ಸಮಿತಿ ಮುಖ್ಯಸ್ಥ ಎಸ್.ಆರ್.ಹೆಗಡೆ ಕುಂಬಾರಕುಳಿ ಹೇಳಿದರು.
ಪಟ್ಟಣದಲ್ಲಿ ವಾಲಿಬಾಲ್ ಪಂದ್ಯಾವಳಿಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದಕ್ಷಿಣ ವಲಯಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ವಿವಿಧ ರಾಜ್ಯದ ಖ್ಯಾತ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಸ್ಥಳಿಯ ಎಲ್ಲ ಧರ್ಮದ, ಜಾತಿಯ ಯುವಕರು ಹಾಗೂ ಕ್ರೀಡಾಸಕ್ತರು ಸಮನ್ವಯತೆಯಿಂದ ಕಳೆದ ಒಂದು ತಿಂಗಳಿನಿಂದ ಪಂದ್ಯಾವಳಿಯ ಯಶಸ್ಸಿಗಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೆ ವಿವಿಧ ಸಮಿತಿಗಳನ್ನು ಸಹ ರಚಿಸಲಾಗಿದೆ. ಪಂದ್ಯಾವಳಿಗೆ ಐದರಿಂದ ಆರು ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ವಾಹನ ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಕೇರಳ, ಸೂನಿ ಫ್ರೆಂಡ್ಸ್, ರೈಲ್ವೇಸ್, ಹೈದರಾಬಾದ್, ತಮಿಳುನಾಡು ಹಾಗೂ ಮಂಗಳೂರು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದೆ. ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ಪಂದ್ಯಾವಳಿ ಉದ್ಘಾಟಿಸಲಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಜಯಾನಂದ ಜೆ.ಪಟಗಾರ ಕುಮಟಾ, ಶ್ರೀಪಾದ ಹೆಗಡೆ ಕಡವೆ, ಮಧು ಬಂಗಾರಪ್ಪ. ಗೋಪಾಲಕೃಷ್ಣ ಬೇಳೂರು, ಕೆ.ಜಿ.ನಾಗರಾಜ್, ವಸಂತ ನಾಯ್ಕ, ವಿ.ಎನ್.ನಾಯ್ಕ ಬೇಡ್ಕಣಿ, ಶಿರಸಿ ಡಿವೈಎಸ್‍ಪಿ ರವಿ ನಾಯ್ಕ, ಉಪೇಂದ್ರ ಪೈ, ಜಿ.ಬಿ.ಭಟ್ಟ ನೆಲೆಮಾಂವ, ಕೆ.ಕೆ.ನಾಯ್ಕ, ಶ್ರೀಧರ ಪಿ.ಹೆಗಡೆ ಬೆಂಗಳೂರು, ತಹಸೀಲ್ದಾರ ಸಂತೋಷ ಭಂಡಾರಿ, ವಿವೇಕ್ ಭಟ್ಟ ಗಡಿಹಿತ್ಲ, ಸಿಪಿಐ ಕುಮಾರ ಕೆ, ರಾಜೇಶ ನಾಯ್ಕ ಮತ್ತಿತರರು ಉಪಸ್ಥಿತರಿರುತ್ತಾರೆ.
ಏ.29ರಂದು ಸಂಜೆ 6ಕ್ಕೆ ಹಾರ್ಸಿಕಟ್ಟಾ ಮುಖ್ಯರಸ್ತೆಯಿಂದ ಆಟಗಾರರನ್ನು, ಉದ್ಘಾಟಕರು, ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳನ್ನು ಡೊಳ್ಳು,ಕೋಲಾಟ ಮತ್ತು ಮೆರವಣಿಗೆಯ ಮೂಲಕ ಆಡದ ಮೈದಾನಕ್ಕೆ ಕರೆತರಲಾಗವುದು ಎಂದು ಹೇಳಿದರು.
ಯೂತ್ ಸ್ಪೋರ್ಟ್ಸ್ ಕ್ಲಬ್‍ನ ಮುಖ್ಯಸ್ಥ ಅಶೋಕ ನಾಯ್ಕ ಹಾರ್ಸಿಕಟ್ಟಾ, ಗ್ರಾಪಂ ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಸಿದ್ಧಾರ್ಥ ಗೌಡರ್ ಮುಠ್ಠಳ್ಳಿ, ಪ್ರಚಾರ ಸಮಿತಿಯ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿದ್ದರು.