ಅಂಕೋಲಾ: ತಾಲೂಕಾಸ್ಪತ್ರೆಯಲ್ಲಿ ಖ್ಯಾತ ಶಸ್ತ್ರ ಚಿಕಿತ್ಸಾ ವೈದ್ಯರಾಗಿರುವ ಡಾ. ಈಶ್ವರಪ್ಪರವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ‘ಕಾಯಕ ಯೋಗಿ ಪ್ರಶಸ್ತಿ’ ಲಭಿಸಿದೆ.
ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರಾಗಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಡಾ. ಈಶ್ವರಪ್ಪನವರು ಹೊಂದಿದ್ದು ಸಲ್ಲಿಸುತ್ತಿರುವ ತಮ್ಮ ಅವಿರತ ಸೇವೆಯಿಂದಾಗಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.