ಕಾರವಾರ: ಜಲಸಾರಿಗೆಗೆ ಕೇಂದ್ರ ಸರಕಾರ ಒತ್ತು ನೀಡುತ್ತಿದ್ದು, ಸಾಗರಮಾಲಾ ಯೋಜನೆಯಡಿಯಲ್ಲಿ ಕಾರವಾರದ ಕಾಳಿ ನದಿ ಮತ್ತು ತದಡಿಯ ಅಘನಾಶಿನಿ ನದಿಯಲ್ಲಿ ಜಲಮಾರ್ಗ ಅಭಿವೃದ್ಧಿಗೆ ಮುಂದಾಗಿದೆ.
ಸಾಗರಮಾಲಾ ಯೋಜನೆಯಡಿ ಕೇಂದ್ರ ಸರಕಾರ ರಾಜ್ಯ ಕರಾವಳಿಯ 6 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒಟ್ಟೂ 168 ಕೋ. ರೂ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾರವಾರದ ಕಾಳಿ ನದಿಗೆ 19 ಕೋ. ರೂ . ಮತ್ತು ಕುಮಟಾದ ಅಘನಾಶಿನಿ ಜಲಮಾರ್ಗದ ಅಭಿವೃದ್ಧಿಗೆ 20 ಕೋ. ರೂ ಬಿಡುಗಡೆ ಮಾಡಿದೆ.
ಕರಾವಳಿಯಲ್ಲಿ ಪ್ರವಾಸೋದ್ಯಕ್ಕೆ ವಿಫುಲ ಅವಕಾಶಗಳಿವೆ. ಸಾಗರ ಮತ್ತು ನದಿಯ ಮೂಲಕ ಜಲ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದ್ದು ಕಾಳಿ ನದಿಯ ಇಕ್ಕೆಲಗಳ ಹಿನ್ನೀರಿನಲ್ಲಿ ಜಲಸಾರಿಗೆ ಮಾರ್ಗದ ಅಭಿವೃದ್ಧಿ ಮತ್ತು ತದಡಿ ಅಘನಾಶಿನಿ ನದಿಯಲ್ಲಿ ಜಲಮಾರ್ಗದ ಅಭಿವೃದ್ಧಿಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಇಲ್ಲಿ ಅಗತ್ಯವಿದ್ದಲ್ಲಿ ಪ್ಲೋಟಿಂಗ್ ಜೆಟ್ಟಿ ನಿರ್ಮಾಣ ಮತ್ತು ಹೌಸ್ ಬೋಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.