ಮುಂಡಗೋಡ: ದೇವಸ್ಥಾನಕ್ಕೆ ಹೋಗಿಬರುತ್ತೇನೆ ಎಂದು ಹೇಳಿಹೋದವಳು ಈವರೆಗೂ ನಾಪತ್ತೆಯಾದ ಘಟನೆ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ
ನಾಪತ್ತೆಯಾದ ಯುವತಿಯನ್ನು ಅನುಷಾ ಸುಬ್ಬಣ್ಣವರ (18) ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ 7 ಗಂಟೆಗೆ ಸುಮಾರು ಗ್ರಾಮದ ಶ್ರೀಮಾರಿಕಾಂಬ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿಹೋದವಳು ಈವರೆಗೂ ನಾಪತ್ತೆಯಾಗಿದ್ದಾಳೆ. ತಮ್ಮ ಮಗಳನ್ನು ಹುಡುಕಿಕೊಡಿ ಎಂದು ಯುವತಿಯ ತಂದೆ ಪೊಲೀಸ್ ಠಾಣೆ ಮಂಗಳವಾರ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ