ಶಿರಸಿ: ಸಪ್ತಕ ಬೆಂಗಳೂರು, ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ಶಿರಸಿಯ ರಾಗಮಿತ್ರಾ ಪ್ರತಿಷ್ಠಾನ (ರಿ) ಮತ್ತು ಮಿತ್ರಾ ಮ್ಯೂಸಿಕಲ್ಸ್ ಇವರ 30ನೇ ವಾಷಿಕೋತ್ಸವ ರಜತೋತ್ಸವದ ಸಂಭ್ರಮ – ಗುರುಸ್ಮರಣೆಯ ನಿಮಿತ್ತ ‘ಗಾಯನ–ವಾದನ–ಸನ್ಮಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿರಸಿ ಯೋಗಮಂದಿರದ ಸಭಾಭವನದಲ್ಲಿ ಏ. 30 ಶನಿವಾರದಂದು ಆಯೋಜಿಸಲಾಗಿದ್ದು ಬೆಳಿಗ್ಗೆ 9 ರಿಂದ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾಯನ- ವಾದನ ಕಾರ್ಯಕ್ರಮಗಳು ನಡೆಯಲಿದೆ.
ಸಾಯಂಕಾಲ 5 ಘಂಟೆಯಿಂದ ಸಭಾ ಕಾರ್ಯಕ್ರಮ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಹಿರಿಯ ಸಾಮಾಜಿಕ ಕಾರ್ಯಕರ್ತ ರಘುಪತಿ ಭಟ್ಟ ಸುಗಾವಿ ಆಗಮಿಸಲಿದ್ದು ವಿ.ಎ ಹೆಗಡೆ ಬೆಳ್ಳೇಕರಿ, ಡಾ. ಸುಮನ್ ದಿನೇಶ ಹೆಗಡೆ, ವೀರಭದ್ರ ಗೌಡರ್ ತಿಗಣಿ ಬನವಾಸಿ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಪಂ. ವಿಶ್ವನಾಥ ಕಾನರೇ ಮುಂಬೈ ಇವರಿಗೆ ದಿ. ಪಂಡಿತ ವಸಂತ ಕನಕಾಪುರ ಧಾರವಾಡ ಇವರ ಸ್ಮರಣಾರ್ಥ “ಕನಕಶ್ರೀ” ಬಿರುದು ಮತ್ತು ಶ್ರೀಮತಿ ವಿದೂಷಿ ಭಾರತಿ ಪ್ರತಾಪ್ ಬೆಂಗಳೂರು ಇವರಿಗೆ “ರಾಗರತ್ನ” ಬಿರುದು ನೀಡಿ ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ಸಂಜೆ 6 ಘಂಟೆಯಿಂದ ಶ್ರೀಮತಿ ವಿದೂಷಿ ಭಾರತಿ ಪ್ರತಾಪ್ ಬೆಂಗಳೂರು ಹಾಗೂ ಪಂ. ವಿಶ್ವನಾಥ ಕಾನರೆ, ಮುಂಬೈ ಇವರು ಗಾಯನ ಹಾಗೂ ಹಾರ್ಮೋನಿಯಂ ಸೋಲೋ ನಡೆಸಿಕೊಡಲಿದ್ದಾರೆ.
ಹಾರ್ಮೋನಿಯಂನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ, ಭರತ ಹೆಗಡೆ,ಗೀತಾ ಜೋಶಿ ಸಾಥ್ ನೀಡಲಿದ್ದು, ತಬಲಾದಲ್ಲಿ ವಿದ್ವಾನ್
ಶಶಿಭೂಷಣ ಗುರ್ಜರ್ ಬೆಂಗಳೂರು, ವಿದ್ವಾನ್ ಶ್ರೀಧರ ಮಾಂಡ್ರೆ ಧಾರವಾಡ, ವಿದ್ವಾನ್ ಶಂಕರ ಹೆಗಡೆ, ವಿಜಯೇಂದ್ರ ಹೆಗಡೆ ಅಜ್ಜೀಬಳ, ಕಿರಣ ಹೆಗಡೆ ಕಾನಗೋಡ ಮತ್ತು ಸುಧಾಕರ ನಾಯ್ಕ ಶಿರಸಿ ಸಾಥ್ ನೀಡಲಿದ್ದಾರೆ. ರತ್ನಾಕರ ಉಂಚಳ್ಳಿ ಕಾರ್ಯಕ್ರಮ ನಿರ್ವಹಿಸಲಿದ್ದು ಸಂಗೀತಾಸಕ್ತರು ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.